ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಪುರುಷ ಭಕ್ತರು, ಮಹಿಳೆಯರಿಗೆ ಇನ್ನೂ ಸಿಗದ ಪ್ರವೇಶ

Update: 2018-10-17 13:27 GMT

ತಿರುವನಂತಪುರ, ಅ.17: ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಪುರುಷ ಭಕ್ತಾಧಿಗಳು ದೇವಸ್ಥಾನದ ಒಳಪ್ರವೇಶಿಸಿದ್ದಾರೆ.  ಆದರೆ ಮಹಿಳಾ ಭಕ್ತಾದಿಗಳಿಗೆ ಇನ್ನೂ ಪ್ರವೇಶ ಸಿಕ್ಕಿಲ್ಲ. 

ತುಲಾಮಾಸದ  ಐದು ದಿನಗಳ ಪೂಜೆಗೆ ಬುಧವಾರ ಸಂಜೆ 5 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ.  ಅಯ್ಯಪ್ಪ ದರ್ಶನಕ್ಕೆ ಮಹಿಳೆಯರು ಆಗಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ಮಾರ್ಗ ಮಧ್ಯ ತಡೆಯಲಾಗುತ್ತಿದೆ. 

ಶಬರಿ ಮಲೆಗೆ  ಪ್ರವೇಶಿಸುವ ಮಹಿಳೆಯರಿಗೆ ಅಡ್ಡಿಪಡಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News