ಸ್ಯಾಂಡಲ್ ವುಡ್ ನಟ ರಿಷಿ ವಿರುದ್ಧ ಎಫ್‌ಐಆರ್ ದಾಖಲು

Update: 2018-10-17 15:09 GMT

ಬೆಂಗಳೂರು, ಅ.17: ಕನ್ನಡ ಚಿತ್ರರಂಗದ ಯುವನಟ ರಿಷಿ ತನ್ನ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅ.11 ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಎಫ್‌ಐಆರ್ ದಾಖಲಿಸಿ, ಪ್ರಕರಣದ ಎರಡನೇಯ ಆರೋಪಿಯಾಗಿರುವ ರಿಷಿ ವಿರುದ್ಧ ತನಿಖೆ ಮುಂದುವರೆಸಿದ್ದಾರೆ.

ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನಟ ರಿಷಿ, ತಂದೆ ನಾಗರಾಜ್, ತಾಯಿ ಅನಲಾ ವಿರುದ್ಧ ಶಾಲಿನಿ ಗೋಪಿನಾಥ್ ಎಂಬುವರು ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News