ಅ.23 ರಿಂದ ಸಮುದಾಯತ್ತ ಶಾಲೆ ಕಾರ್ಯಕ್ರಮ

Update: 2018-10-17 15:16 GMT

ಬೆಂಗಳೂರು, ಅ.17: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಅ.23 ಮತ್ತು ಅ.25ರಂದು ಹಮ್ಮಿಕೊಳ್ಳಲಾಗಿದೆ.

ಪ್ರಾಥಮಿಕ ಶಾಲೆಯ ಸಮುದಾಯದತ್ತ ಕಾರ್ಯಕ್ರಮ ಅ.23ರಂದು ಹಾಗೂ ಪ್ರೌಢಶಾಲೆಯ ಕಾರ್ಯಕ್ರಮ ಅ.25ರಂದು ನಡೆಸಲು ತೀರ್ಮಾನಿಸಲಾಗಿದೆ. ಎರಡನೇ ಹಂತದ ಸಮುದಾಯದತ್ತ ಶಾಲೆ 2019ರ ಏಪ್ರಿಲ್ 9 ಮತ್ತು 10ರಂದು ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಸಮುದಾಯದತ್ತ ಶಾಲೆ ಬೆಳಗ್ಗೆ 10.30ರಿಂದ ಆರಂಭಗೊಂಡು ಮಧ್ಯಾಹ್ನ 3.30ರವರೆಗೂ ನಡೆಯಲಿದೆ. ನಂತರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅನಂತರ ಶಾಲೆಗೆ ಸತತ ಗೈರಾದ ವಿದ್ಯಾರ್ಥಿಗಳ ಮನೆಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಣಾಧಿಕಾರಿಗಳು ಭೇಟಿ ನೀಡಲಿದ್ದಾರೆ.

ಸಮುದಾಯದತ್ತ ಶಾಲೆಯ ಮಾಹಿತಿ ಮಕ್ಕಳ ಪಾಲಕರಿಗೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಶಾಲೆಯಿಂದ ಮುಂಚಿತವಾಗಿ ತಿಳಿಸಬೇಕು. ಸಮುದಾಯದತ್ತ ಶಾಲೆ ಅಂಗವಾಗಿ ಶಾಲಾ ಪರಿಸರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ವಿದ್ಯಾರ್ಥಿಗಳ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನದ ಫಲಿತಾಂಶ ಅಧ್ಯಾಪಕರು ಸಿದ್ಧಪಡಿಸಬೇಕು. ಸಮುದಾಯದತ್ತ ಶಾಲೆಗೆ ಪಾಲಕರು ಕಡ್ಡಾಯವಾಗಿ ಬರುವಂತೆ ಮನವೊಲಿಸಬೇಕು ಎಂದು ಶಾಲಾ ಮುಖ್ಯಶಿಕ್ಷಕರಿಗೆ ಇಲಾಖೆ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News