ಬೈಕ್ ಕಳವು ಆರೋಪಿ ಸೆರೆ: 12 ಲಕ್ಷ ರೂ. ಮೌಲ್ಯದ 6 ಬೈಕ್‌ ಜಪ್ತಿ

Update: 2018-10-17 15:20 GMT

ಬೆಂಗಳೂರು, ಅ.17: ಮಾರಾಟಕ್ಕಿಟ್ಟ ಬೈಕ್ ಜಾಹೀರಾತು ವೀಕ್ಷಿಸಿ, ಪರೀಕ್ಷಾರ್ಥ ಚಾಲನೆ ಮಾಡುವುದಾಗಿ ನಂಬಿಸಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಯುವಕನೊಬ್ಬನನ್ನು ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿ, 12 ಲಕ್ಷ ರೂ. ಮೌಲ್ಯದ 6 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ಮುನೇಶ್ವರ ಲೇಔಟ್‌ನ ಮಂಜುನಾಥ ಹೆಗಡೆ (20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹೆಗಡೆ, ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟ ವಾಹನದ ಜಾಹೀರಾತು ನೋಡಿ, ವಾಹನ ಮಾಲಕರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ವಾಹನ ಖರೀದಿ ಮಾಡುವುದಾಗಿ ನಂಬಿಸುತ್ತಿದ್ದ. ಪರೀಕ್ಷಾರ್ಥ ಚಾಲನೆಗಾಗಿ ಬೈಕ್ ಪಡೆದು ಕಳ್ಳತನ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ-ವಿಭಾಗದ ಸಹಾಯಕ ಆಯುಕ್ತ ಕೆ.ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ತಂಡದಲ್ಲಿ ಇನ್‌ಸ್ಪೆಕ್ಟರ್ ಮಲ್ಲೇಶ್, ಸಬ್ ಇನ್‌ಸ್ಪೆಕ್ಟರ್ ಸಂಜೀವ ಗುರಪ್ಪ, ಸಿಬ್ಬಂದಿ ಶಿವಚಂದ್ರಪ್ಪ, ಶರಣಪ್ಪ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News