ಸ್ಪೋಕನ್ ಟ್ಯುಟೋರಿಯಲ್ ಕಾರ್ಯಕ್ರಮ ಅನುಷ್ಠಾನ

Update: 2018-10-17 16:10 GMT

ಬೆಂಗಳೂರು, ಅ.17: ಪದವಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತೆ ಮತ್ತು ಕೌಶಲಾಭಿವೃದ್ಧಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ಮುಂಬೈನ ಐಐಟಿ ಸಹಯೋಗದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಈ ಕಾರ್ಯಕ್ರಮ ಕಾರ್ಯರೂಪಕ್ಕೆ ಬರಲಿದೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಮೂಲಕ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳನ್ನು ಪದವಿಯ ಜತೆಗೆ ಅಧ್ಯಯನ ಮಾಡಬಹುದು.

ಇಂಗ್ಲಿಷ್ ಸಹಿತವಾಗಿ ಭಾರತದ 22 ಭಾಷೆಯಲ್ಲಿ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಪ್ರೊ.ಎಸ್.ಮಲ್ಲೇಶ್ವರಪ್ಪ ಮಾಹಿತಿ ನೀಡಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ಕೇಂದ್ರ ಸರಕಾರದ ಸ್ವಯಂ ಪೋರ್ಟಾಲ್ ಮೂಲಕ ನ್ಪೋಕನ್ ಟ್ಯುಟೋರಿಯಲ್ ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಆಯ್ಕೆ ಮಾಡುವ ಕೋರ್ಸ್ ಆಧಾರದಲ್ಲಿ ಮುಂಬೈ ಐಐಟಿಯಿಂದ ಆನ್‌ಲೈನ್ ಮೂಲಕವೇ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ. ಆದರೆ, ಈ ಕಾರ್ಯಕ್ರಮ ಇನ್ನು ಕಡ್ಡಾಯಗೊಳಿಸಿಲ್ಲ. ಆಸಕ್ತ ವಿದ್ಯಾರ್ಥಿಗಳು ಸೇರಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಯಾವ ಕೋರ್ಸ್ ಲಭ್ಯ: ಬೇಸಿಕ್ ಐಟಿ ಸ್ಕಿಲ್, ಮಾಯಾ ಮತ್ತು 3ಡಿ ಮ್ಯಾಕ್ಸ್, ಕ್ಯಾಂಡ್ಸಿ++, ಅಡ್ವಾನ್ಸಡ್ ಸಿ++, ಕಾಲ್ಡಿಸೈನಸರ್, ಫೈರ್ಫಾಕ್ಸ್, ಫ್ರಂಟ್ ಅಕೌಂಟಿಂಗ್, ಜಾವಾ, ಜಾವಾ ಬಿಜಿನೆಸ್ ಅಪ್ಲಿಕೇಷನ್ ಸಹಿತವಾಗಿ 49 ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಆಫರ್ ಮಾಡಲಾಗಿದೆ. ವಿದ್ಯಾರ್ಥಿಗಳು ತಮಗೆ ಬೇಕಾದ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News