ಪರ್ತಕರ್ತ ಖಶೋಗಿ ಮೃತಪಟ್ಟಿರುವ ಸಾಧ್ಯತೆಯಿದೆ: ಟ್ರಂಪ್

Update: 2018-10-19 16:28 GMT

ವಾಶಿಂಗ್ಟನ್,ಅ.19: ಸೌದಿ ಮೂಲದ ಪತ್ರಕರ್ತ ಜಮಾಲ್ ಖಶೋಗಿ ಮೃತಪಟ್ಟಿರುವ ಸಾಧ್ಯತೆಯಿದೆಯೆಂದು ತಾನೀಗ ನಂಬಿದ್ದೇನೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಹಾಗೂ ಒಂದು ವೇಳೆ ಖಶೋಗಿ ಸಾವಿಗೆ ಸೌದಿ ಆರೇಬಿಯ ಹೊಣೆಗಾರನಾಗಿರುವುದು ಸಾಬೀತಾದಲ್ಲಿ ಅದು ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾಗುವುದು ಎಂದವರು ಎಚ್ಚರಿಕೆ ನೀಡಿದ್ದಾರೆ.

 ವಾಶಿಂಗ್ಟನ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಟ್ರಂಪ್ ಅವರನ್ನು “ಕಳೆದ ಎರಡು ವಾರಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಜಮಾಲ್ ಸತ್ತಿದ್ದಾರೆಂಬುದಾಗಿ ತಾವೀಗ ನಂಬುತ್ತಿರಾ” ಎಂದು ಸುದ್ದಿಗಾರರು ಪ್ರಶ್ನಿಸಿದಾಗ,ಅವರು, ‘‘ನಿಶ್ಚಿತವಾಗಿಯೂ, ಜಮಾಲ್ ಸಾವಿಗೀಡಾಗಿರುವ ಹಾಗೆ ಕಾಣುತ್ತಿದೆ. ಇದು ಅತ್ಯಂತ ವಿಷಾದಕರವಾಗಿದೆ’’ ಎಂದರು.

ವಾಶಿಂಗ್ಟನ್‌ಪೋಸ್ಟ್‌ನ ಅಂಕಣಕಾರ ಹಾಗೂ ಸೌದಿ ಆಡಳಿತದ ಪ್ರಬಲ ಟೀಕಾಕಾರರೂ ಆಗಿರುವ ಟ್ರಂಪ್ ಅವರ ಹತ್ಯೆಯಲ್ಲಿ ಶಾಮೀಲಾಗಿದೆಯೆಂಬ ಆರೋಪ ಎದುರಿಸುತ್ತಿರುವ ಸೌದಿ ಆಡಳಿತದ ವಿರುದ್ಧ ಅಮೆರಿಕವು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆಯೇ ಎಂದು ಪತ್ರಕರ್ತರ ಪ್ರಶ್ನೆಗೆ, ‘‘ಅಮೆರಿಕ ಕೈಗೊಳ್ಳುವ ಕ್ರಮವು ಅತ್ಯಂತ ಕಠಿಣವಾಗಲಿದೆ. ಅದು ಅತ್ಯಂತ ಕೆಟ್ಟದಾಗಿರುವುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News