ಮೆಟ್ರೋ ನಿಲ್ದಾಣದಲ್ಲಿಯೇ ಅಂಚೆ ಸೇವೆ ಲಭ್ಯ !

Update: 2018-10-19 17:07 GMT

ಬೆಂಗಳೂರು, ಅ.19: ದೇಶದಲ್ಲಿ ಮೊದಲ ಬಾರಿಗೆ ನಗರದ ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಅಂಚೆ ಸೇವೆ ನೀಡಲು ಅಂಚೆ ಇಲಾಖೆ ಸಿದ್ಧತೆ ನಡೆಸಿದೆ.

ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ) ಕಾರ್ಡ್ ಬಳಸಿ, ಮೆಟ್ರೋ ನಿಲ್ದಾಣದಿಂದಲೇ ತಲುಪಿಸಬೇಕಾದ ಸ್ಥಳಕ್ಕೆ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಸೇರಿದಂತೆ ಎಲ್ಲ ರೀತಿಯ ಅಂಚೆ ಸೇವೆ ಪಡೆಯಬಹುದಾಗಿದೆ. ದೇಶದಲ್ಲೆ ಪ್ರಪ್ರಥಮ ಬಾರಿಗೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯಾಧುನಿಕ ವಿಶೇಷ ವಿನ್ಯಾಸದ ಸಾಧನಗಳನ್ನು ಸಿದ್ಧಪಡಿಸಲಾಗಿದೆ. ಸಾರ್ಟ್ ಪೋಸ್ಟ್ ಕಿಯೋಸ್ಕ್ ಯಂತ್ರದ ಮೂಲಕ ಅಂಚೆ ಇಲಾಖೆ ಜನರ ಬಳಿಗೆ ಹೋಗುತ್ತಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಕಿಯೋಸ್ಕ್ ಅಳವಡಿಸಿ ಸದ್ಯ ಸ್ಪೀಡ್ ಪೋಸ್ಟ್ ಹಾಗೂ ರಿಜಿಸ್ಟರ್ ಪೋಸ್ಟ್‌ಗಳನ್ನು ಕಳುಹಿಸಬಹುದು.

ಸ್ಪೀಡ್ ಹಾಗೂ ರಿಜಿಸ್ಟರ್ ಪೋಸ್ಟ್‌ಗಳನ್ನು ಎಲ್ಲಿಗೆ ಕಳುಹಿಸಬೇಕೆಂದು ಬಾರ್ ಕೋಡ್ ನಮೂದು ಮಾಡಿದರೆ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಯಂತ್ರದಲ್ಲಿ ಬಾರ್ ಕೋಡ್ ಬರಲಿದೆ. ಅದನ್ನು ಲಕೋಟೆ ಮೇಲೆ ಅಂಟಿಸಿ ಬಳಿಕ ತಲುಪಬೇಕಾದ ವಿಳಾಸ ನಮೂದಿಸಬೇಕು. ಅದರ ತೂಕ ಎಷ್ಟಿದೆ ಎಂಬುದರ ಆಧಾರದ ಮೇಲೆ ಶುಲ್ಕ ಪಾವತಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News