ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ: ಎಲ್ಲ ವರ್ಗದವರಿಗೂ ರೋಗ ಪತ್ತೆ ಪರೀಕ್ಷೆ ಸೌಲಭ್ಯ ಉಚಿತ

Update: 2018-10-20 17:13 GMT

ಬೆಂಗಳೂರು, ಅ. 20: ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿಯಲ್ಲಿ ಎಲ್ಲ ವರ್ಗದ ಜನರಿಗೂ, ಸರಕಾರಿ ಆಸ್ಪತ್ರೆಗಳಲ್ಲಿ ವಿವಿಧ 58 ಬಗೆಯ ರೋಗ ಪತ್ತೆ ಪರೀಕ್ಷೆ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದೆ.

ಈ ಮೊದಲು ಜಿಲ್ಲಾಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಕೆಲವೊಂದು ರೋಗ ಪತ್ತೆ ಪರೀಕ್ಷೆಗಳು ಉಚಿತವಾಗಿ ನಡೆಸಲಾಗುತ್ತಿತ್ತು. ಇನ್ನು ಕೆಲ ರೋಗಗಳ ಪರೀಕ್ಷೆಗಳಿಗೆ ಶೇ.50ರಷ್ಟು ಹಣ ಪಾವತಿ ಮಾಡಬೇಕಾಗಿತ್ತು. ಈ ವ್ಯಾಪ್ತಿಯ 18-19ನೇ ಸಾಲಿನ ರಾಷ್ಟೀಯ ಆರೋಗ್ಯ ಮಿಷನ್ ಯೋಜನೆಯ ಉಚಿತ ರೋಗ ಪತ್ತೆ ಪರೀಕ್ಷೆಗಳಡಿ ಎಲ್ಲ ವರ್ಗದ ಜನರಿಗೂ ಸಂಪೂರ್ಣ ಉಚಿತ ರೋಗ ಪತ್ತೆ ಪರೀಕ್ಷೆ ಸೇವೆ ಒದಗಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲ ಮಟ್ಟದ ಸರಕಾರಿ ಆಸ್ಪತ್ರೆ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಯೋಜನೆಯ ಪಟ್ಟಿಯಲ್ಲಿರುವ 58 ರೋಗ ಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ಮಾಡಬೇಕಾಗಿದೆ. ಕಳೆದ ವಾರದಿಂದಲೇ ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಈ ಆದೇಶ ಪಾಲಿಸಲಾಗುತ್ತಿದೆ.

ಯಾವ ಪರೀಕ್ಷೆಗಳು ಉಚಿತ

ದುಬಾರಿ ವೆಚ್ಚದ ಎಂಆರ್‌ಐ, ಸೀಟಿ ಸ್ಕಾನಿಂಗ್, ಥೈರಾಯ್ಡ್, ಹೃದ್ರೋಗ, ಯಕೃತ್, ಮೂತ್ರಪಿಂಡ ತಪಾಸಣೆ ಪರೀಕ್ಷೆ, ಕ್ಷ-ಕಿರಣ, ರಕ್ತಗುಂಪಿನ ಪರೀಕ್ಷೆ ಸೇರಿದಂತೆ ಎಲ್ಲ ಬಗೆಯ ರಕ್ತ, ಮೂತ್ರ, ಮಲೇರಿಯಾ. ಡೆಂಗ್ಯೂ ಅಲ್ಟ್ರಾಸೌಂಡ್ ಸ್ಕಾನಿಂಗ್, ಕೊಬ್ಬಿನಾಂಶ ಪರೀಕ್ಷೆಗಳೂ ಸೇರಿದಂತೆ ಆಸ್ಪತ್ರೆಗಳಲ್ಲಿ ಲಭ್ಯವಿರುವ 58 ಪರೀಕ್ಷೆಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರಲಿವೆ ಎಂದು ಬೆಂಗಳೂರಿನ ಕೆಸಿ.ಜನರಲ್ ಆಸ್ಪತ್ರೆಯ ಅಧೀಕ್ಷಕಿ ಭಾನುಮೂರ್ತಿ ತಿಳಿಸಿದ್ದಾರೆ.

ವ್ಯಾಪಿಗೆ ಒಳಪಟ್ಟ ಆಸ್ಪತ್ರೆಗಳು

42 ಜಿಲ್ಲಾಮಟ್ಟದ ಆಸ್ಪತ್ರೆಗಳು 146 ತಾಲ್ಲೂಕು ಮಟ್ಟದ ಆಸ್ಪತ್ರೆಗಳು

2,508 ಪ್ರಾಥಮಿಕ ಆರೋಗ್ಯ ಕೇಂದ್ರಗಳು 204 ಸಮುದಾಯ ಆರೋಗ್ಯ ಕೇಂದ್ರಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News