​ಅತ್ಯಾಚಾರಿಗಳಿಂದ ಪಾರಾಗಲು 3ನೇ ಮಹಡಿಯಿಂದ ನಗ್ನವಾಗಿ ಹಾರಿದ ಮಹಿಳೆ

Update: 2018-10-22 04:04 GMT

ಜೈಪುರ, ಅ.22: ಸಾಮೂಹಿಕ ಅತ್ಯಾಚಾರ ಎಸಗಿದ ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ನೇಪಾಳಿ ಮಹಿಳೆಯೊಬ್ಬರು ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ನಗ್ನವಾಗಿ ಕೆಳಕ್ಕೆ ಹಾರಿರುವ ಘಟನೆ ನಡೆದಿದೆ.

ಮಹಿಳೆ ನೀಡಿದ ದೂರಿನ ಮೇರೆಗೆ ಲೋಕೇಶ್ ಸೈನಿ ಮತ್ತು ಕಮಲ್ ಸೈನಿ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಜೈಪುರ ದಕ್ಷಿಣ ಎಸಿಪಿ ಕೆ.ಕೆ.ಅವಸ್ಥಿ ಹೇಳಿದ್ದಾರೆ.

ಶನಿವಾರ ರಾತ್ರಿ ಮಹಿಳೆಯ ಮೇಲೆ ಈ ಇಬ್ಬರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆಪಾದಿಸಲಾಗಿದೆ. ಆರೋಪಿಗಳು ಚಿತ್ರಹಿಂಸೆ ನೀಡಲು ಆರಂಭಿಸಿದಾಗ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಗ್ನವಾಗಿಯೇ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಹಾರಿದ್ದಾಗಿ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ಜೈಪುರದಿಂದ 18 ಕಿಲೋಮೀಟರ್ ದೂರದ ಮುಹಾನಾ ಎಂಬಲ್ಲಿ ಈ ಘಟನೆ ನಡೆದಿದೆ.

ಜೈಪುರಿಯಾ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News