ಅತಿಯಾಗಿ ಮೊಬೈಲ್ ಬಳಸುವವರೇ ಎಚ್ಚರಿಕೆ: ವಿಚಿತ್ರ ರೋಗಕ್ಕೆ ತುತ್ತಾಗಿದ್ದಾರೆ ಈ ಮಹಿಳೆ!

Update: 2018-10-23 07:54 GMT

ಬೀಜಿಂಗ್, ಅ.23: ಒಂದು ವಾರ ಕಾಲ ನಿರಂತರವಾಗಿ ಮೊಬೈಲ್ ಬಳಸಿದ ಪರಿಣಾಮವಾಗಿ ಮಹಿಳೆಯೊಬ್ಬರ ಕೈಬೆರಳುಗಳು ಚಲನೆಯನ್ನೇ ಕಳೆದುಕೊಂಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಶಾಂಫೈಯಿಸ್ಟ್ ವರದಿ ಪ್ರಕಾರ, ಈ ಘಟನೆ ನಡೆದಿರುವುದು ಚೀನಾದ ಹುನಾನ್ ಪ್ರಾಂತ್ಯದ ಚಂಗ್‍ಶಾ ನಗರದಲ್ಲಿ.

ಮಹಿಳೆ ಒಂದು ವಾರ ರಜೆಯ ಸಂದರ್ಭ ಮೊಬೈಲ್‍ನಲ್ಲಿ ಮಗ್ನಳಾಗಿದ್ದಳು. ಪ್ರತಿ ದಿನ ರಾತ್ರಿ ನಿದ್ದೆ ಮಾಡುವಾಗ ಮಾತ್ರ ಮೊಬೈಲ್ ಬಿಡುತ್ತಿದ್ದಳು. ಕೆಲ ದಿನಗಳ ಬಳಿಕ ಬಲಗೈಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿತು. ಜತೆಗೆ ಕೈಬೆರಳುಗಳು ಚಲನಶೀಲತೆ ಕಳೆದುಕೊಂಡಿರುವುದು ಗಮನಕ್ಕೆ ಬಂತು. ಮೊಬೈಲ್ ಹಿಡಿದುಕೊಂಡ ಭಂಗಿಯಲ್ಲೇ ಬೆರಳುಗಳು ಸೆಟೆದುಕೊಂಡಿದ್ದು, ಕೈಮಡಚಲೂ ಸಾಧ್ಯವಾಗುತ್ತಿರಲಿಲ್ಲ.

ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ವಿಚಾರಿಸಿದಾಗ, ಒಂದೇ ಬಗೆಯಲ್ಲಿ ಅಂಗಾಂಗ ಚಲನೆಯನ್ನು ಪ್ರತಿದಿನ ಮಾಡುತ್ತಿದ್ದ ಕಾರಣ, ಟೆನೊಸಿನೋವಿಟಿಸ್ ಎಂಬ ರೋಗದಿಂದ ಆಕೆ ಬಳಲುತ್ತಿರುವುದನ್ನು ವೈದ್ಯರು ದೃಢಪಡಿಸಿದರು. ಇದು ಸ್ನಾಯುರಜ್ಜುವಿನಲ್ಲಿ ನೀರು ತುಂಬಿಕೊಳ್ಳುವ ಉರಿಯೂತದ ಸಮಸ್ಯೆಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News