ಸುಪ್ರೀಂ ತೀರ್ಪು ಅಸ್ವೀಕಾರಾರ್ಹ, ನಾನು ಪಟಾಕಿ ಸಿಡಿಸುತ್ತೇನೆ ಎಂದ ಬಿಜೆಪಿ ಸಂಸದ!

Update: 2018-10-24 08:50 GMT

ಹೊಸದಿಲ್ಲಿ, ಅ.24: ದೀಪಾವಳಿ ಸಂದರ್ಭ ಪಟಾಕಿಗಳನ್ನು ಕೇವಲ ರಾತ್ರಿ 8 ಗಂಟೆಯಿಂದ 10ರ ತನಕ ಮಾತ್ರ ಸಿಡಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿರುವ ಬಿಜೆಪಿ ಸಂಸದ ಚಿಂತಾಮಣಿ ಮಾಲವಿಯ, ಹಬ್ಬಗಳ ಸಂದರ್ಭ ಇಂತಹ ಸಮಯಮಿತಿಯನ್ನು ನಿಗದಿಪಡಿಸುವ ಹಾಗಿಲ್ಲ. ತಾನು ದೀಪಾವಳಿಯಂದು ಪೂಜೆಯ ನಂತರ ಪಟಾಕಿ ಸಿಡಿಸುವುದಾಗಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ‘ಅಸ್ವೀಕಾರಾರ್ಹ’ ಎಂದ ಬಿಜೆಪಿ ಸಂಸದ, ‘‘ನಮ್ಮ ಧಾರ್ಮಿಕ ಪದ್ಧತಿಗಳು ಹಾಗೂ ಹಬ್ಬಗಳನ್ನು ಹಿಂದು ಪಂಚಾಂಗದಂತೆ ಆಚರಿಸಲಾಗುತ್ತದೆ. ನಾನು ಪೂಜೆಯ ನಂತರವಷ್ಟೇ ಪಟಾಕಿ ಸಿಡಿಸುತ್ತೇನೆ. ಈ ರೀತಿಯ ನಿಬಂಧನೆಗಳು ಮೊಘಲರ ಕಾಲದಲ್ಲಿಯೂ ಇರಲಿಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಲು ನಿರಾಕರಿಸಿದೆ ಹಾಗೂ ಕಡಿಮೆ ಪ್ರಮಾಣದ ವಿಷಗಾಳಿ ಹೊರಸೂಸುವ ಹಾಗೂ ಕಡಿಮೆ ಡೆಸಿಬಲ್ ಸದ್ದು ಹೊಂದಿದೆ ಹಸಿರು ಪಟಾಕಿಗಳನ್ನು ಎಲ್ಲಾ ಧಾರ್ಮಿಕ ಹಬ್ಬಗಳಂದು ಉಪಯೋಗಿಸಲು ಅನುಮತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News