ಅನ್ಯ ಸಮಾಜವನ್ನು ಗೌರವಿಸಿ: ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವಾರಂ

Update: 2018-10-28 15:49 GMT

ಬೆಂಗಳೂರು, ಅ.28: ಅನ್ಯ ಸಮಾಜವನ್ನು ಗೌರವಿಸಿ, ಪ್ರೀತಿಸಿ ಸಾಮರಸ್ಯದಿಂದ ಬಾಳಿದಾಗ ಮನುಷ್ಯ ಜೀವನ ಹಸನವಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವಾರಂ ಹೇಳಿದರು.

ರವಿವಾರ ನಗರದ ಬನ್ನೇರುಘಟ್ಟ ರಸ್ತೆಯ ಬಿಲ್ಲವ ಭವನದಲ್ಲಿ ಬಿಲ್ಲವ ಅಸೋಸಿಯೇಷನ್ ಆಯೋಜಿಸಿದ್ದ 42ನೇ ವಾರ್ಷಿಕೋತ್ಸವ ಮತ್ತು ಬಿಲ್ಲವ ಯುವ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಲ್ಲವ ಸಮಾಜದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ. ಅದ್ದರಿಂದ ತಮ್ಮ ಮಕ್ಕಳಲ್ಲಿ ಒಳಿತಿನ ಬಗ್ಗೆ ಪೋಷಕರು ಅರಿವು ಮೂಡಿಸುವ ಅಗತ್ಯವಿದೆ. ಜೊತೆ ಜೊತೆಯಾಗಿ ಶಿಕ್ಷಣಕ್ಕೆ ಮಹತ್ತರವಾದ ಪ್ರಾಮುಖ್ಯತೆ ನೀಡಬೇಕಾದ ಅನಿವಾರ್ಯ ಇದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಯೋಧ ಮೇಜರ್ ಬಿ.ಕೆ.ಸುವರ್ಣ, ಲೆಫ್ಟಿನೆಂಟ್ ಪೂವಪ್ಪ ಪೂಜಾರಿ, ಸೇರಿದಂತೆ ಸಮುದಾಯದ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ವೇದಕುಮಾರ್ ಸೇರಿದಂತೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News