ಇಸ್ರೇಲ್ ಜೊತೆ ಯಾವುದೇ ರೀತಿಯ ಸಂಬಂಧ ಬೆಳೆಸುವುದಿಲ್ಲ: ಪಾಕ್ ಅಧ್ಯಕ್ಷ

Update: 2018-10-28 16:22 GMT

ಇಸ್ಲಾಮಾಬಾದ್,ಅ.28: ಕೆಲವು ಅಧಿಕಾರಿಗಳನ್ನು ಹೊತ್ತ ಇಸ್ರೇಲ್‌ನ ವಿಮಾನವು ಪಾಕಿಸ್ತಾನಕ್ಕೆ ಆಗಮಿಸಿದೆ ಎಂಬ ಸುದ್ದಿಯನ್ನು ನಿರಾಕರಿಸಿದ ಪಾಕ್ ಅಧ್ಯಕ್ಷ ಆರಿಫ್ ಅಲ್ವಿ, ಇಸ್ರೇಲ್ ಜೊತೆ ಯಾವುದೇ ರೀತಿಯ ಸಂಬಂಧ ಬೆಳೆಸುವುದಿಲ್ಲ ಎಂದು ರವಿವಾರ ತಿಳಿಸಿದ್ದಾರೆ.

ಇಸ್ರೇಲ್ ಜೊತೆ ಪಾಕಿಸ್ತಾನ ಯಾವುದೇ ರೀತಿಯ ಸಂಬಂಧ ಬೆಳೆಸುವುದಿಲ್ಲ ಎಂದು ಅಲ್ವಿ ಟರ್ಕಿಗೆ ಮೂರು ದಿನಗಳ ಅಧಿಕೃತ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಕರೆದ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ. ಇಸ್ರೇಲ್‌ನ ಜೆಟ್‌ವೊಂದು ಕೆಲವು ಅಧಿಕಾರಿಗಳನ್ನು ಹೊತ್ತು ಟೆಲ್ ಅವಿವ್‌ನಿಂದ ಇಸ್ಲಾಮಾಬಾದ್‌ಗೆ ತೆರಳಿತ್ತು. ಅಲ್ಲಿ ಹತ್ತು ಗಂಟೆಗಳ ಕಾಲ ವಿಮಾನವು ನಂತರ ವಾಪಸ್ ಇಸ್ರೇಲ್‌ಗೆ ಮರಳಿದೆ ಎಂದು ಇಸ್ರೇಲ್‌ನ ಪತ್ರಕರ್ತ ಅವಿ ಶರ್ಫ್ ಅಕ್ಟೋಬರ್ 25ರಂದು ಟ್ವೀಟ್ ಮಾಡಿದ್ದರು.

ಈ ಮಾಹಿತಿ ಆಧಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ರಹಸ್ಯ ಇಸ್ರೇಲ್ ಯೋಜನೆಗೆ ವಿವರಣೆ ನೀಡುವಂತೆ ಜನರು ಸರಕಾರವನ್ನು ಆಗ್ರಹಿಸಿದ್ದರು. ವಿಪಕ್ಷಗಳೂ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತಲ್ಲದೆ ವಿವರಣೆ ನೀಡುವಂತೆ ಪಟ್ಟು ಹಿಡಿದಿತ್ತು. ಈ ಸುದ್ದಿಯನ್ನು ತಳ್ಳಿಹಾಕಿರುವ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ, ಇದೊಂದು ನಕಲಿ ಮತ್ತು ಆಧಾರರಹಿತ ಸುದ್ದಿ ಎಂದು ತಿಳಿಸಿದ್ದಾರೆ. ನಂತರ ಟ್ವೀಟ್ ಮಾಡಿದ ಇಸ್ರೇಲ್ ಪತ್ರಕರ್ತ, ಆ ವಿಮಾನವು ಇಸ್ಲಾಮಾಬಾದ್‌ನಲ್ಲೇ ಇಳಿದಿದೆಯೇ ಎಂದು ನಾನು ಶೇ.100 ಖಚಿತವಾಗಿ ಹೇಳಲಾರೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News