ಬೆಂಗಳೂರು ಕೇಂದ್ರ ವಿವಿಯಲ್ಲಿ ಪ್ರಗತಿಪರ ಚಿಂತನೆಗೆ ಪೂರಕ ವಾತಾವರಣ ನಿರ್ಮಾಣ: ಉಪಕುಲಪತಿ ಪ್ರೊ.ಜಾಫೆಟ್

Update: 2018-10-28 16:30 GMT

ಬೆಂಗಳೂರು, ಅ.28: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಪಠ್ಯದ ಜೊತೆಗೆ ಸಾಹಿತ್ಯ ಹಾಗೂ ಪ್ರಗತಿಪರ ಚಿಂತನೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗುವುದು ಎಂದು ಉಪಕುಲಪತಿ ಪ್ರೊ.ಜಾಫೆಟ್ ತಿಳಿಸಿದರು.

ರವಿವಾರ ಸಮಾಜಮುಖಿ ಮಾಸಪತ್ರಿಕೆ ವತಿಯಿಂದ ನಗರದ ಸೆಂಟ್ರಲ್ ಕಾಲೇಜಿನ ಸಿ.ವಿ.ರಾಮನ್ ಭಾಂಗಣದಲ್ಲಿ ಆಯೋಜಿಸಿದ್ದ ಸಮಾಜಮುಖಿ ಲೇಖಕರ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ 160 ವರ್ಷಗಳ ಇತಿಹಾಸವಿದೆ. ವಿಶ್ವವಿದ್ಯಾಲಯದ ಪ್ರಾರಂಭದಿಂದಲೂ ನಾಡಿನ ಸಾಹಿತ್ಯ, ಸಾಂಸ್ಕೃತಿಕತೆ ಹಾಗೂ ಪ್ರಗತಿಪರ ಚಳವಳಿಗೆ ವೇದಿಕೆಯನ್ನು ಒದಗಿಸಿತ್ತು. ಇದೇ ಮಾದರಿಯಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲೂ ಪ್ರಗತಿಪರ ಚಿಂತನೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಸಮಾಜಮುಖಿ ಮಾಸಪತ್ರಿಕ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸಅಲೆಯನ್ನು ಮೂಢಿಸುತ್ತಿದೆ. ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಲೇಖನಗಳ ಮೌಲ್ಯ, ಪತ್ರಿಕೆಯ ವಿನ್ಯಾಸ ಹಾಗೂ ಪತ್ರಿಕೆಯ ಸಂಪಾಕೀಯ ಮಂಡಳಿ ಓದುಗರನ್ನು ಒಳಗೊಳ್ಳಿಸಿಕೊಳ್ಳುವ ರೀತಿ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜಮುಖಿ ಪತ್ರಿಕೆಯ ಸಂಪಾದಿಕೀಯ ಮಂಡಳಿ ನಾಡಿನ ವಿವಿಧ ಕ್ಷೇತ್ರದ ತಜ್ಞರನ್ನು ಗುರುತಿಸಿ ಪತ್ರಿಕೆಗೆ ಬರೆಯಲು ಪ್ರೇರಣೆ ನೀಡುತ್ತಿದೆ. ಇದರಿಂದ ನಾಡಿಗೆ ಹೊಸ ಲೇಖಕರನ್ನು ಪರಿಚಯಿಸುವುದು ಹಾಗೂ ವಿಭಿನ್ನ ವಿಷಯಗಳ ಕುರಿತು ಓದುಗರಿಗೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿದೆ. ಹೀಗಾಗಿ ಪತ್ರಿಕೆ ನಾಡಿನಾದ್ಯಂತ ವ್ಯಾಪಕವಾಗಿ ವಿಸ್ತರಿಸಲಿ ಎಂದು ಅವರು ಆಶಿಸಿದರು.

ಸಾಹಿತಿ ಜಯರಾಮ್ ರಾಯಪುರ ಮಾತನಾಡಿ, ಮೂಲತಃ ಕನ್ನಡದ ಸಾಹಿತ್ಯ ಕ್ಷೇತ್ರ ವೈಚಾರಿಕ ಹಿನ್ನೆಲೆಯನ್ನು ಹೊಂದಿರುವಂತಹದ್ದಾಗಿದೆ. ಇಂತಹ ಚಿಂತನೆಗಳನ್ನು ಮುನ್ನಡೆಸುಕೊಂಡು ಹೋಗುವುದು ಹಾಗೂ ನಾಡಿನ ಸಾಮಾನ್ಯ ಜನತೆಯ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಉದ್ದೇಶದಿಂದ ಸಮಾಜಮುಖಿ ಪತ್ರಿಕೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತರಾದ ಪದ್ಮರಾಜ ದಂಡಾವತಿ, ಎನ್.ಎ.ಎಂ. ಇಸ್ಮಾಯಿಲ್, ಚಿಂತಕ ಪೃಥ್ವಿದತ್ತ ಚಂದ್ರಶೋಭಿ ಲೇಖಕರ ಕವ್ಮುಟದಲ್ಲಿ ಭಾಗವಹಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News