ಬಿಎಂಟಿಸಿಗೆ 2018ನೆ ಸಾಲಿನ ‘ಅರ್ಬನ್ ಮೊಬಿಲಿಟಿ ಪ್ರಶಸ್ತಿ’

Update: 2018-10-29 16:48 GMT

ಬೆಂಗಳೂರು, ಅ. 29: ‘ಅತ್ಯುತ್ತಮ ನಗರ ಸಾರಿಗೆ ಸೇವೆ’ಗೆ ಮಹಾರಾಷ್ಟ್ರ ಸರಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಯ್ಕೆಯಾಗಿದೆ.

‘ಬಸ್ ಪ್ರಯಾಣಿಕರ ಪ್ರಯಾಣ ಅನುಭವವನ್ನು ಸುಧಾರಿಸುವತ್ತ ಬಿಎಂಟಿಸಿ’ ಯೋಜನೆಗೆ 2018ರ ಸಾಲಿನ ಅರ್ಬನ್ ಮೊಬಿಲಿಟಿ ಪ್ರಶಸ್ತಿ ಲಭಿಸಿದೆ. ಸದರಿ ಪ್ರಶಸ್ತಿಯನ್ನು ನ.4ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಬಿಎಂಟಿಸಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News