ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗ: ಟೈಮ್ಸ್ ನೌ-ಸಿಎನ್ ಎಕ್ಸ್ ಸಮೀಕ್ಷೆ

Update: 2018-11-02 07:04 GMT

ಹೊಸದಿಲ್ಲಿ, ನ.1: ರಾಜಸ್ಥಾನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಟೈಮ್ಸ್ ನೌ-ಸಿಎನ್ ಎಕ್ಸ್ ಚುನಾವಣಾಪೂರ್ವ ಸಮೀಕ್ಷೆ ಕಂಡುಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ 110ರಿಂದ 120ರವರೆಗೆ ಸೀಟುಗಳನ್ನು ಗಳಿಸಲಿದೆ ಎನ್ನುತ್ತಿದೆ ಈ ಸಮೀಕ್ಷೆ.

67 ಕ್ಷೇತ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, 43.5 ಶೇ. ಮತಗಳು ಕಾಂಗ್ರೆಸ್ ಗೆ 40.37 ಶೇ. ಮತಗಳು ಬಿಜೆಪಿಗೆ ಮತ್ತು ಇತರರಿಗೆ 13.55 ಶೇ. ಮತಗಳು ಲಭಿಸಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಬಿಎಸ್ಪಿ 1ರಿಂದ 3 ಸೀಟುಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಸಮೀಕ್ಷೆ ತಿಳಿಸುತ್ತದೆ.

2013ರ ಚುನಾವಣೆಯಲ್ಲಿ 163 ಸೀಟುಗಳಲ್ಲಿ ಜಯ ಗಳಿಸುವ ಮೂಲಕ ಬಿಜೆಪಿ ಅಧಿಕಾರ ಹಿಡಿದಿತ್ತು. ಆದರೆ ಕಾಂಗ್ರೆಸ್ ಗೆ ಕೇವಲ 21 ಸೀಟುಗಳು ಲಭಿಸಿತ್ತು. ಈ ಬಾರಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ನಿರುದ್ಯೋಗ ಸಮಸ್ಯೆಯೇ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News