ರಾವಣ, ಧುರ್ಯೋಧನ ಹೆಸರು ಏಕೆ ಇಟ್ಟುಕೊಂಡಿಲ್ಲ: ಆದಿತ್ಯನಾಥ್ ಪ್ರಶ್ನೆ

Update: 2018-11-05 04:00 GMT

ಹರಿದ್ವಾರ, ನ.5: ಅಲಹಾಬಾದ್ ಹೆಸರನ್ನು 'ಪ್ರಯಾಗಾಬಾದ್' ಎಂದು ಮರುನಾಮಕರಣ ಮಾಡಿರುವ ಕ್ರಮವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪೌರಾಣಿಕ ಹಿನ್ನೆಲೆಯ ಹೆಸರಿಟ್ಟಿರುವುದನ್ನು ಸಮರ್ಥಿಸಿಕೊಂಡಿರುವ ಅವರು, ಪ್ರತಿಭಟನಾಕಾರರು ರಾವಣ ಅಥವಾ ಧುರ್ಯೋಧನ ಎಂಬ ಹೆಸರನ್ನು ಏಕೆ ಇಟ್ಟುಕೊಂಡಿಲ್ಲ ಎಂದು ಮರುನಾಮಕರಣ ವಿರುದ್ಧ ಹೋರಾಟ ನಡೆಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹರಿದ್ವಾರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ನಾನು ಅಲಹಾಬಾದ್ ಹೆಸರು ಬದಲಿಸಿದಾಗ, ಕೆಲ ಮಂದಿ ಆಕ್ಷೇಪ ವ್ಯಕ್ತಪಡಿಸಿದರು. ಹೆಸರಿನಲ್ಲೇನಿದೆ ಎಂದು ಪ್ರಶ್ನಿಸಿದರು. ಹಾಗಾದರೆ ನಿಮ್ಮ ಪೋಷಕರು ನಿಮಗೇಕೆ ರಾವಣ ಅಥವಾ ಧುರ್ಯೋಧನ ಎಂಬ ಹೆಸರಿಟ್ಟಿಲ್ಲ ಎಂದು ನಾನು ಪ್ರಶ್ನಿಸಿದೆ. ಈ ದೇಶದಲ್ಲಿ ಹೆಸರಿಗೆ ವಿಶೇಷ ಮಹತ್ವವಿದೆ" ಎಂದು ಯೋಗಿ ವಿವರಿಸಿದರು.

ಭಾರತದಲ್ಲಿ ಬಹಳಷ್ಟು ಮಂದಿ ಅದರಲ್ಲೂ ಮುಖ್ಯವಾಗಿ ಬುಡಕಟ್ಟು ಪಂಡಗಕ್ಕೆ ಸೇರಿದವರು ರಾಮನಿಗೆ ಸಂಬಂಧಿಸಿದ ಹೆಸರಿಟ್ಟುಕೊಳ್ಳುತ್ತಾರೆ. ರಾಮ ನಮ್ಮ ವೈಭವದ ಪರಂಪರೆ ಜತೆ ನಮಗೆ ಸಂಬಂಧ ಕಲ್ಪಿಸುತ್ತಾರೆ" ಎಂದು ಬಣ್ಣಿಸಿದರು.

ಅಲಹಾಬಾದನ್ನು ಪ್ರಯಾಗಾಬಾದ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವಕ್ಕೆ ಆದಿತ್ಯನಾಥ್ ಸರ್ಕಾರ ಅಕ್ಟೋಬರ್ 16ರಂದು ಅನುಮೋದನೆ ನೀಡಿತ್ತು ಹಾಗೂ ಇದು ಜನರ ಇಚ್ಛೆಯಂತೆ ಕೈಗೊಂಡ ನಿರ್ಧಾರ ಎಂದು ಸಮರ್ಥಿಸಿಕೊಂಡಿತ್ತು. ಮೊಘಲ್ ದೊರೆ ಅಕ್ಬರ್, ಈ ನಗರವನ್ನು ಇಲಾಹಾಬಾದ್ ಎಂದು 1575ರಲ್ಲಿ ನಾಮಕರಣ ಮಾಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News