​ಮುಂದಿನ ವಾರ ಅಮೆರಿಕ ಉಪಾಧ್ಯಕ್ಷ- ಮೋದಿ ಭೇಟಿ

Update: 2018-11-09 04:04 GMT

ವಾಷಿಂಗ್ಟನ್, ನ.9: ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮುಂದಿನ ವಾರ ತಮ್ಮ ನಾಲ್ಕು ದೇಶಗಳ ಪ್ರವಾಸದ ಅವಧಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿ ವೇಳೆ ಅವರು ಅಮೆರಿಕ- ಏಸಿಯಾನ್ ಶೃಂಗ ಮತ್ತು ಸಿಂಗಾಪುರದಲ್ಲಿ ನಡೆಯುವ ಪೂರ್ವ ಏಷ್ಯಾ ಶೃಂಗಸಭೆಯಲ್ಲೂ ಪಾಲ್ಗೊಳ್ಳುವರು ಎಂದು ಶ್ವೇತಭವನ ಪ್ರಕಟಿಸಿದೆ.

ಸಾಮಾನ್ಯವಾಗಿ ಶೃಂಗಸಭೆಯಲ್ಲಿ ಅಮೆರಿಕದ ಅಧ್ಯಕ್ಷರು ಭಾಗವಹಿಸುತ್ತಾರೆ. ಆದರೆ, ಈ ಬಾರಿ ಟ್ರಂಪ್ ವಿನಂತಿಯಂತೆ ಮೈಕ್ ಪೆನ್ಸ್ ಭಾಗವಹಿಸುತ್ತಿದ್ದಾರೆ.

ಪೆನ್ಸ್ ನವೆಂಬರ್ 11ರಿಂದ 18ರವರೆಗೆ ಜಪಾನ್, ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಪಪುವಾ ನ್ಯೂಗಿನಿ ದೇಶಗಳಿಗೆ ಭೇಟಿ ನೀಡುವರು. ಮೋದಿ ಅವರ ಜತೆಗೆ ಪೆನ್ಸ್ ಅವರು ಜಪಾನ್‌ನ ಪ್ರಧಾನಿ ಶಿಂಝೊ ಅಬೆ, ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್, ಪಪುವಾ ಪ್ರಧಾನಿ ಪೀಟರ್ ಒನೀಲ್ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಅಮೆರಿಕ- ಏಸಿಯನ್ ಶೃಂಗ ಮತ್ತು ಎಪಿಇಸಿ ಶೃಂಗಗಳಲ್ಲಿ ಭಾಗವಹಿಸುವ ಮೂಲಕ ಅಮೆರಿಕ ಈ ಪ್ರದೇಶದಲ್ಲಿ ತನ್ನ ಮುಂದಾಳುತ್ವವನ್ನು ಎತ್ತಿಹಿಡಿಯಲಿದೆ ಹಾಗೂ ಇಂಡೋ- ಪೆಸಿಫಿಕ್ ಭಾಗದ ಸ್ವಾತಂತ್ರ್ಯ, ಆರ್ಥಿಕ ಪ್ರಗತಿ ಮತ್ತು ಭದ್ರತೆಯ ಬಗೆಗಿನ ತನ್ನ ಬದ್ಧತೆಯನ್ನು ಎತ್ತಿತೋರಿಸಲಿದೆ" ಎಂದು ಉಪಾಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಅನೀಸಾ ಫರಾಹ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News