ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿಗೆ 23 ಬಲಿ

Update: 2018-11-11 16:54 GMT

ಸ್ಯಾನ್‌ಫ್ರಾನ್ಸಿಸ್ಕೊ,ನ.10: ದಕ್ಷಿಣ ಕ್ಯಾಲಿಫೋರ್ನಿಯಾದ ಪರ್ವತಪ್ರದೇಶದ ದಟ್ಟಾರಣ್ಯದಲ್ಲಿ ಕಾಡ್ಗಿಚ್ಚು ಹಾವಳಿ ಮುಂದುವರಿದಿದ್ದು, ಈವರೆಗೆ 23 ಮಂದಿ ಸಾವನ್ನಪಿದ್ದಾರೆ. ವೇಗವಾಗಿ ಹರಡುತ್ತಿರುವ ಕಾಡ್ಗಿಚ್ಚಿನ ಅಟ್ಟಹಾಸಕ್ಕೆ ಭಯಭೀತರಾಗಿರುವ ಸಾವಿರಾರು ಮಂದಿ ಮನೆಗಳನ್ನು ತೊರೆದು ಪಲಾಯನಗೈದಿದ್ದಾರೆ. ಇಡೀ ಮಾಲಿಬು ನಗರ, ಸಮೀಪದಲ್ಲೇ ಇರುವ ನೌಕಾನೆಲೆ ಹಾಗೂ ಹಲವಾರು ಹಾಲಿವುಡ್ ತಾರೆಯರ ಮನೆಗಳನ್ನು ಖಾಲಿ ಮಾಡಲಾಗಿದೆ.

ಶುಷ್ಕ ಹವೆಯೊಂದಿಗೆ, ಪ್ರಚಂಡವಾಗಿ ಬೀಸುತ್ತಿರುವ ಸಾಂತಾ ಅನಾ ಗಾಳಿಯು ಪರ್ವತಪ್ರದೇಶದಲ್ಲಿರುವ ಮಾಲಿಬು ಪಟ್ಟಣವನ್ನು ವ್ಯಾಪಿಸಿರುವುದಾಗಿ ಮೂಲಗಳು ತಿಳಿಸಿವೆ.

   ವೂಲ್ಸೆ ಫೈರ್ ಎಂದೇ ಹೆಸರಿಡಲಾದ ಈ ಕಾಡ್ಗಿಚ್ಚು, ಶುಕ್ರವಾರ ಸಂಜೆಯ ವೇಳೆ ನಾಲ್ಕು ಪಟ್ಟು ಅಧಿಕ ವೇಗದಲ್ಲಿ 22 ಚದರ ಮೈಲು ಪ್ರದೇಶಕ್ಕೆ ಹರಡಿದೆಯೆಂದು ಅವು ಹೇಳಿವೆ.ಈ ಮಧ್ಯೆ ಮಾಲಿಬು ನಗರದ ನಿವಾಸಿ ಖ್ಯಾತ ಹಾಲಿವುಡ್ ನಟಿ ಕ್ಯಾಟಿಲಿನ್ ಜೆನ್ನರ್ ಅವರು ಇನ್ಸ್‌ಟಾಗ್ರಾಮ್ ವಿಡಿಯೋವೊಂದನ್ನು ಪ್ರಸಾರ ಮಾಡಿ ತಾನು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಆದರೆ ತನ್ನ ನಿವಾಸಕ್ಕೆ ಏನಾಗಿದೆಯೆಂಬ ಬಗ್ಗೆ ತನಗೆ ಖಾತರಿಯಿಲ್ಲವೆಂದು ಆಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News