ರಫೇಲ್ ಒಪ್ಪಂದ: ದರ ವಿವರಗಳ ಪಟ್ಟಿಯನ್ನು ಸುಪ್ರೀಂಗೆ ಸಲ್ಲಿಸಿದ ಕೇಂದ್ರ

Update: 2018-11-12 12:11 GMT

 ಹೊಸದಿಲ್ಲಿ, ನ.12: ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಬೆಲೆ ವಿವರಗಳ ಪಟ್ಟಿಯನ್ನು ಕೇಂದ್ರ ಸರಕಾರ ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಈ ಮೂಲಕ ಸರಕಾರ ಅರ್ಜಿದಾರರಲ್ಲಿ ಒಪ್ಪಂದದ ನಿರ್ಧಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಯ ವಿವರಗಳನ್ನು ಹಂಚಿಕೊಂಡಿದೆ.

ಫ್ರಾನ್ಸ್‌ನ ಡಸ್ಸಾಲ್ಟ್ ಕಂಪೆನಿಯಿಂದ 59,000 ಕೋ.ರೂ. ವೆಚ್ಚದಲ್ಲಿ 36 ಜೆಟ್ ವಿಮಾನಗಳನ್ನು ಖರೀದಿಸಿರುವ ಒಪ್ಪಂದಕ್ಕೆ ಸಂಬಂಧಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದೀಗ ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ ಕೇಂದ್ರ ಸರಕಾರ ದರ ಪಟ್ಟಿಯನ್ನು ಸಲ್ಲಿಸಿದೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಬುಧವಾರ ಮುಂದುವರಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

 ಸುಪ್ರೀಂಕೋರ್ಟ್ ಅ.30 ರಂದು ನೀಡಿದ ತೀರ್ಪಿನಲ್ಲಿ ಅರ್ಜಿದಾರರಾದ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ ಹಾಗೂ ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್‌ಗೆ ಫ್ರಾನ್ಸ್‌ನಿಂದ ಖರೀದಿಸಿರುವ 36 ರಫೇಲ್ ಯುದ್ದ ವಿಮಾನಗಳ ದರ ವಿವರವನ್ನು ನೀಡುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು.

.............

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News