ಕರ್ನಾಟಕ ಆರೋಗ್ಯ ಯೋಜನೆಯಿಂದ 600 ಜನರಿಗೆ ಪ್ರಯೋಜನ: ​ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್

Update: 2018-11-12 15:18 GMT

ಬೆಂಗಳೂರು, ನ.12: ಕೇಂದ್ರ ಆರೋಗ್ಯ ಸಂಸ್ಥೆಯೊಂದಿಗೆ ರಾಜ್ಯ ಆರೋಗ್ಯ ಯೋಜನೆಯನ್ನು ವಿಲೀನಗೊಳಿಸಿದ 2 ವಾರಗಳಲ್ಲಿ 600ಕ್ಕೂ ಹೆಚ್ಚು ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆಂದು ರಾಜ್ಯ ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಹೇಳಿದ್ದಾರೆ. 

ಯೋಜನೆಯಿಂದ 5 ಲಕ್ಷ ರೂ.ವಿಮೆಯನ್ನು ನೀಡಲಿದ್ದು, 62 ಲಕ್ಷ ಬಡ ಕುಟುಂಬಗಳಿಗೆ ಲಾಭವಾಗಲಿದೆ. ಸಾಮಾಜಿಕವಾಗಿ ವಂಚಿತರಾದವರು 1,615 ಮಾಧ್ಯಮಿಕ ಹಾಗೂ ಸಂಕೀರ್ಣ ಕಾರ್ಯವಿಧಾನಗಳ ಮೂಲಕ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯ ಸರಕಾರ ಕೂಡ 5 ಲಕ್ಷದೊಂದಿಗೆ 1.5 ಲಕ್ಷವನ್ನು ವಿಸ್ತರಿಸಿದೆ. ಬಿಪಿಎಲ್ ಕುಟುಂಬಗಳಿಗೆ 65 ಲಕ್ಷ ರೂ.ವಿಮೆ ದೊರೆಯಲಿದೆ. ರಾಜ್ಯದಲ್ಲಿ ಒಟ್ಟು 1.15 ಕೋಟಿ ಬಿಪಿಎಲ್ ಕುಟುಂಬಗಳಿವೆ. 19 ಲಕ್ಷ ಎಪಿಎಲ್ ಕುಟುಂಬಗಳಿವೆ. ಎಪಿಎಲ್ ಕಾರ್ಡ್‌ಗಳನ್ನು ಹೊಂದಿರುವವರಿಗೆ ಶೇ.30 ರಷ್ಟು ವಿಮೆಯನ್ನು ರಾಜ್ಯ ಸರಕಾರ ನೀಡಲಿದೆ. ಇದರೊಂದಿಗೆ ರೂ.1.5 ಲಕ್ಷ ವಿಮೆ ಕೂಡ ನೀಡಲಿದೆ ಎಂದು ತಿಳಿಸಿದ್ದಾರೆ.

ರೋಗಿಗಳಿಗೆ ಚಿಕಿತ್ಸೆ ನೀಡಲು 900 ಆಸ್ಪತ್ರೆಗಳಿದ್ದು, ಇದರಲ್ಲಿ 490 ಖಾಸಗಿ ಆಸ್ಪತ್ರೆಗಳಾಗಿವೆ. ಕೆಪಿಎಂಇ ಕಾಯ್ದೆಯಂತೆಯೇ ತಜ್ಞರ ಸಮಿತಿ ರಚಿಸಿ ಚಿಕಿತ್ಸಾ ವೆಚ್ಚಗಳನ್ನು ನಿಗದಿಪಡಿಸಲಾಗುತ್ತದೆ. ಶೀಘ್ರದಲ್ಲಿಯೇ ಈ ಕಾರ್ಯವನ್ನು ಮಾಡಲಾಗುತ್ತದೆ. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗಳಲ್ಲಿ ಪ್ರಕ್ರಿಯೆಗಳ ವೆಚ್ಚ ಭಿನ್ನತೆಗಳು ಕಂಡು ಬಂದಿದ್ದೇ ಆದರೆ, ನಂತರ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಶೀಘ್ರದಲ್ಲಿಯೇ ಮಂಡಳಿಯ ಅಡಿಗೆ ಹಲವು ಆಸ್ಪತ್ರೆಗಳು ಸೇರ್ಪಡೆಗೊಳ್ಳಲಿವೆ ಎಂದಿದ್ದಾರೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕ ನಘತ್ ತಬಸ್ಸುಮ್ ಅಬ್ರೂ ಅವರು ಮಾತನಾಡಿ, 62 ಲಕ್ಷ ಕುಟುಂಬಗಳ ವೆಚ್ಚದ ಶೇ.60 ರಷ್ಟನ್ನು ಕೇಂದ್ರ ಸರಕಾರ ಭರಿಸುತ್ತಿದೆ. ಇನ್ನುಳಿದ ಶೇ.40 ರಷ್ಟನ್ನು ರಾಜ್ಯ ಸರಕಾರ ಹೊರುತ್ತಿದೆ. ಯೋಜನೆ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಯೋಜನೆ ಕುರಿತು ಸರಕಾರ ಮಂಗಳವಾರ ಅಥವಾ ಬುಧವಾರ ಆದೇಶಗಳನ್ನು ನೀಡಲಿದೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರ ಈವರೆಗೂ 4.5 ಲಕ್ಷ ಆರೋಗ್ಯ ಕರ್ನಾಟಕ ಗುರುತು ಚೀಟಿಗಳನ್ನು ನೀಡಿದ್ದು, ಕಾರ್ಡ್‌ನ್ನು ಎಆರ್‌ಕೆಐಡಿ(ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಐಡಿ) ಎಂದು ಕರೆಯಲಾಗುತ್ತದೆ. ಸರಕಾರದ ಆದೇಶದ ಬಳಿಕ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಸರಕಾರ ಯೋಜನೆಗಳ ಎರಡೂ ಲೋಗೋಗಳನ್ನೂ ಐಡಿ ಕಾರ್ಡ್‌ಗಳ ಮೇಲೆ ಮುದ್ರಿಸಲಾಗುತ್ತದೆ. ಪ್ರಸ್ತುತ ವಿತರಿಸುವ ಕಾರ್ಡ್‌ಗಳೂ ಕೂಡ ಮಾನ್ಯವಾಗಿರುತ್ತವೆ. ಬಿಪಿಎಲ್ ಕಾರ್ಡ್ ಮೂಲಕ ಚಿಕಿತ್ಸೆ ಪಡೆಯುವ ರೋಗಿಗಳು ಆಧಾರ್ ಕಾರ್ಡ್‌ಗಳನ್ನು ನೀಡುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಆಯುಷ್ಮಾನ್ ಭಾರತ್ ಸಿಇಒ ಇಂದು ಭೂಷಣ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕಣ್ಗಾವಲಿನ ವ್ಯವಸ್ಥೆಯೊಂದಿದ್ದು, ಇದರಲ್ಲಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡದ ಹೊರತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಮಾಹಿತಿಯಿದೆ. ರೋಗಿಗಳು ಸರಕಾರಿ ಆಸ್ಪತ್ರೆಗೆ ತೆರಳಬೇಕು. ಒಂದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲದೇ ಹೋದರೆ, ಅಲ್ಲಿಂದ ಪತ್ರವನ್ನು ತಂದರೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂಬ ಮಾಹಿತಿಯಿದೆ. ಈ ರೀತಿ ವ್ಯವಸ್ಥೆಯನ್ನು ಇತರೆ ರಾಜ್ಯಗಳೂ ಕೂಡ ಅನುಸರಿಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News