ಆಂಗ್ ಸನ್ ಸೂಕಿಗೆ ನೀಡಿದ್ದ ಅತ್ಯುನ್ನತ ಪ್ರಶಸ್ತಿ ವಾಪಸ್ ಪಡೆದ ಆಮ್ನೆಸ್ಟಿ

Update: 2018-11-13 14:43 GMT

ಲಂಡನ್, ನ. 13: ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಅಲ್ಲಿನ ಸೇನೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಾರಣಕ್ಕಾಗಿ ಆಂಗ್ ಸನ್ ಸೂಕಿ ಅವರಿಗೆ ನೀಡಿದ್ದ ಅತ್ಯುನ್ನತ ಪ್ರಶಸ್ತಿಯನ್ನು ಆಮ್ನೆಸ್ಟಿ ಇಂಟರ್‌ ನ್ಯಾಷನಲ್ ಸೋಮವಾರ ವಾಪಸ್ ಪಡೆದಿದೆ.

ಬೌದ್ಧರ ಪ್ರಾಬಲ್ಯ ಹೊಂದಿರುವ ಮ್ಯಾನ್ಮಾರ್‌ನಿಂದ 7.2 ಲಕ್ಷ ರೋಹಿಂಗ್ಯಾ ಮಂದಿಯನ್ನು ಅಲ್ಲಿನ ಸೇನೆ ಹೊರಗಟ್ಟಿದ ಬಳಿಕ, 1991ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಸೂಕಿ ಇತ್ತೀಚೆಗೆ ಕಳೆದುಕೊಂಡಿರುವ ಅತ್ಯುನ್ನತ ಗೌರವ ಇದಾಗಿದೆ.

ಸೂಕಿ ಅವರಿಗೆ 2009ರಲ್ಲಿ ನೀಡಿದ ಅತ್ಯುನ್ನತ ಅಂಬಾಸಿಡರ್ ಆಫ್ ಕನ್‌ಸೈನ್ಸ್ (ಆತ್ಮಸಾಕ್ಷಿಯ ರಾಯಭಾರಿ) ಗೌರವನ್ನು ರದ್ದುಪಡಿಸಿರುವುದಾಗಿ ಲಂಡನ್ ಮೂಲದ ಮಾನವಹಕ್ಕು ಸಂಘಟನೆ ಪ್ರಕಟಿಸಿದೆ.

"ನೀವು ಇನ್ನು ಮುಂದೆ ನಿರೀಕ್ಷೆ, ಸಾಹಸ ಮತ್ತು ಮಾನವಹಕ್ಕುಗಳ ಸಂರಕ್ಷಣೆಯನ್ನು ಪ್ರತಿನಿಧಿಸುವ ಸಂಕೇತವಾಗಿ ಉಳಿದಿಲ್ಲ ಎಂಬ ತೀವ್ರ ನಿರಾಸೆಯಿಂದ ಪ್ರಕಟಿಸುತ್ತಿದ್ದೇವೆ" ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮುಖ್ಯಸ್ಥರಾದ ಕುಮಿ ನಯ್ಡೂ ಸೂಕಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

"ಆತ್ಮಸಾಕ್ಷಿಯ ರಾಯಭಾರಿ ಪ್ರಶಸ್ತಿಯ ಗೌರವದ ಸ್ಥಾನಮಾನವನ್ನು ನೀವು ಉಳಿಸಿಕೊಳ್ಳುವುದನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ತೀರಾ ಬೇಸರದಿಂದ ಈ ಪ್ರಶಸ್ತಿಯನ್ನು ವಾಪಸ್ ಪಡೆಯುತ್ತಿದ್ದೇವೆ"

 ‘ನೀವೀಗ ಭರವಸೆಯ ಸಂಕೇತವಾಗಿ ಉಳಿದಿಲ್ಲ’

‘‘ನೀವಿಂದು ಭರವಸೆ, ಧೈರ್ಯ ಮತ್ತು ಮಾನವಹಕ್ಕುಗಳ ರಕ್ಷಣೆಯ ಸಂಕೇತವಾಗಿ ಉಳಿದಿಲ್ಲ ಎನ್ನುವುದರಿಂದ ನಾವು ನಿರಾಶಾರಾಗಿದ್ದೇವೆ’’ ಎಂದು ಸೂ ಕಿಗೆ ಬರೆದ ಪತ್ರವೊಂದರಲ್ಲಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಮುಖ್ಯಸ್ಥ ಕುಮಿ ನೈಡೂ ಹೇಳಿದ್ದಾರೆ.

‘‘ನೀವು ‘ಅಂಬಾಸಡರ್ ಆಫ್ ಕಾನ್ಶನ್ಸ್ ಪ್ರಶಸ್ತಿ’ ವಿಜೇತರು ಎನ್ನುವುದನ್ನು ಸಮರ್ಥಿಸಲು ಇನ್ನು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ, ಅತ್ಯಂತ ಬೇಸರದಿಂದ ಈ ಪ್ರಶಸ್ತಿಯನ್ನು ನಾವು ನಿಮ್ಮಿಂದ ವಾಪಸ್ ಪಡೆಯುತ್ತಿದ್ದೇವೆ’’ ಎಂದು ಪತ್ರದಲ್ಲಿ ಹೇಳಲಾಗಿದೆ.

ಸೂ ಕಿಗೆ 1991ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿತ್ತು.

ಮಾನವಹಕ್ಕು ಹೋರಾಟಗಾರ ನಿರಂತರ ಬಂಧನ

ಮ್ಯಾನ್ಮಾರ್‌ನಲ್ಲಿ ಸೂ ಕಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ, ಮಾನವಹಕ್ಕುಗಳ ಹೋರಾಟಗಾರರು ಮತ್ತು ಪತ್ರಕರ್ತರನ್ನು ನಿರಂತರವಾಗಿ ಬಂಧಿಸಲಾಗುತ್ತಿದೆ ಹಾಗೂ ಬೆದರಿಸಲಾಗುತ್ತಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಆರೋಪಿಸಿದೆ.

ಇದೇ ವಿಷಯದಲ್ಲಿ, ಸೂ ಕಿಗೆ ನೀಡಲಾಗಿದ್ದ ಕೆನಡದ ಗೌರವ ಪೌರತ್ವವನ್ನೂ ಕಳೆದ ತಿಂಗಳು ಹಿಂದಕ್ಕೆ ಪಡೆಯಲಾಗಿತ್ತು.

ವಿಶ್ವವಿದ್ಯಾಲಯಗಳು ಹಾಗೂ ಸ್ಥಳೀಯ ಮತ್ತು ಪ್ರಾದೇಶಿಕ ಸರಕಾರಗಳು ನೀಡಿರುವ ಹಲವು ಪ್ರಶಸ್ತಿಗಳನ್ನೂ ಸೂ ಕಿಯಿಂದ ಕಸಿದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News