ಮಹಿಳೆಯ ಹೊಟ್ಟೆಯಲ್ಲಿ 1.5 ಕೆಜಿ ನಟ್, ಬೋಲ್ಟ್, ಪಿನ್‌ಗಳು ಪತ್ತೆ!

Update: 2018-11-13 07:44 GMT

ಅಹ್ಮದಾಬಾದ್, ನ.13: ಇಂಚಿನಷ್ಟು ಉದ್ದದ ನಟ್‌ಗಳು, ಬೋಲ್ಟ್‌ಗಳು, ಸೇಫ್ಟಿ ಪಿನ್‌ಗಳು, ಯು-ಪಿನ್‌ಗಳು, ಹೇರ್ ಪಿನ್, ಬ್ರಾಸ್‌ಲೆಟ್ಸ್, ಚೈನ್‌ಗಳು, ಮಂಗಳ ಸೂತ್ರ, ತಾಮ್ರದ ರಿಂಗ್, ಬಳೆಗಳು...ಇದು ಹಾರ್ಡ್‌ವೇರ್ ಅಂಗಡಿ ಅಥವಾ ಆಭರಣ ಅಂಗಡಿಯಲ್ಲಿರುವ ವಸ್ತುಗಳ ಪಟ್ಟಿಯಲ್ಲ...ಇತ್ತೀಚೆಗೆ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಪತ್ತೆಯಾದ ವಸ್ತುಗಳು.

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ 40ರ ಪ್ರಾಯದ ಸಂಗೀತಾ ಎಂಬ ಹೆಸರಿನ ಮಹಿಳೆ ಅಕ್ಟೋಬರ್ 31 ರಂದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಹಾರಾಷ್ಟ್ರದ ಶಿರಡಿ ಮೂಲದ ಮಾನಸಿಕ ಅಸ್ವಸ್ಥ್ಥೆಯಾಗಿರುವ ಸಂಗೀತಾ ಬೀದಿ ಬದಿಯಲ್ಲಿ ಅಲೆದಾಡುತ್ತಿದ್ದರು. ಅವರನ್ನು ನ್ಯಾಯಾಲಯದ ಆದೇಶದಂತೆ ಮಾನಸಿಕ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘‘ಮಹಿಳೆಯ ಹೊಟ್ಟೆ ಕಲ್ಲಿನಂತೆ ಗಟ್ಟಿಯಾಗಿತ್ತು. ಎಕ್ಸ್‌ರೇ ಬಳಿಕ ಸೇಫ್ಟಿ ಪಿನ್ ಮಹಿಳೆಯ ಶ್ವಾಸಕೋಶದಿಂದ ಹೊರಕ್ಕೆ ಬಂದಿರುವುದು ಪತ್ತೆಯಾಗಿದೆ. ಒಂದು ಪಿನ್ ಮಹಿಳೆಯ ಹೊಟ್ಟೆಯನ್ನು ಸೀಳಿದೆ. ಹೀಗಾಗಿ ತಕ್ಷಣವೇ ಆಪರೇಶನ್ ನಡೆಸಬೇಕಾಯಿತು. ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು’’ ಎಂದು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ನಿತಿನ್ ಕುಮಾರ್ ಹೇಳಿದ್ದಾರೆ.

‘‘ಅಕ್ಯುಫಾಗಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಈ ಮಹಿಳೆಗೆ ಚೂಪಾದ ವಸ್ತುಗಳನ್ನು ತಿನ್ನುವ ಅಭ್ಯಾಸವಿದೆ. ಈ ಕಾಯಿಲೆ ಮಾನಸಿಕ ಅಸ್ತಸ್ಥರಿಗೆ ಇರುತ್ತದೆ. ಈ ಮಹಿಳೆ ಕೆಲವು ತಿಂಗಳಿಂದ ಈ ಕಾಯಿಲೆಗೆ ತುತ್ತಾಗಿದೆ’’ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News