ಮಂಡ್ಯದಲ್ಲಿ ತಲೆ ಎತ್ತಲಿರುವ 125 ಅಡಿ ಎತ್ತರದ ಪ್ರತಿಮೆ ಯಾರದ್ದು ಗೊತ್ತಾ?

Update: 2018-11-15 08:56 GMT

ಬೆಂಗಳೂರು, ನ.15: ಗುಜರಾತ್ ರಾಜ್ಯದಲ್ಲಿ ಸರ್ದಾರ್ ಪಟೇಲ್ ಅವರ ಜಗತ್ತಿನ ಅತ್ಯಂತ ಎತ್ತರದ ಏಕತೆಯ ಪ್ರತಿಮೆ ಅನಾವರಣಗೊಂಡ ಬೆನ್ನಲ್ಲೇ ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ಮಂಡ್ಯ ಜಿಲ್ಲೆಯ ಕೃಷ್ಣ ರಾಜಸಾಗರ ಅಣೆಕಟ್ಟು ಪ್ರದೇಶದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ನಿರ್ಮಿಸಲು ಚಿಂತನೆ ನಡೆಸಿದೆ.

ಅಲ್ಲಿಯೇ ಪಕ್ಕದಲ್ಲಿ ಮ್ಯೂಸಿಯಂ,  ಕೆಆರ್‍ಎಸ್ ಅಣೆಕಟ್ಟು ಇನ್ನಷ್ಟು ಅದ್ಭುತವಾಗಿ ಕಾಣಿಸುವಂತೆ ಮಾಡುವ 360 ಅಡಿ ಎತ್ತರದ ಎರಡು ಗಾಜಿನ ಗೋಪುರಗಳು, ಒಂದು ಬ್ಯಾಂಡ್ ಸ್ಟ್ಯಾಂಡ್, ಒಳಾಂಗಣ ಸ್ಟೇಡಿಯಂ ಹಾಗೂ ಐತಿಹಾಸಿಕ ಸ್ಮಾರಕಗಳ ಮಾದರಿಗಳನ್ನು ನಿರ್ಮಿಸಿ ಪ್ರವಾಸೋದ್ಯಮ ಉತ್ತೇಜಿಸುವ ಇರಾದೆಯೂ ಸರಕಾರಕ್ಕಿದೆ. ಈ ಯೋಜನೆಯ ಒಟ್ಟು ವೆಚ್ಚ 1,200 ಕೋಟಿ ರೂ.ಗಳಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News