ನ.16 ರಿಂದ ವಿಜ್ಞಾನ ಉಪನ್ಯಾಸ

Update: 2018-11-15 17:12 GMT

ಬೆಂಗಳೂರು, ನ. 15: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಸೆಂಟ್ರಲ್ ಕಾಲೇಜಿನಲ್ಲಿ ನ.16ರಿಂದ ಮೂರು ದಿನಗಳವರೆಗೆ ಪ್ರತಿದಿನ ಸಂಜೆ 5ಗಂಟೆಗೆ ನೊಬೆಲ್ ಪ್ರಶಸ್ತಿ ವಿಜೇತ 12 ಸಾಧಕರ ಸಂಶೋಧನೆಯ ಮೇಲೆ ಬೆಳಕು ಚೆಲ್ಲುವ ವಿಶೇಷ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದೆ.

ಉಪನ್ಯಾಸವನ್ನು ಡಿಸಿಎಂ ಡಾ.ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರಗಳಲ್ಲಿ ನೊಬಲ್ ಪ್ರಶಸ್ತಿ ಪಡೆದ ಸಂಶೋಧನೆಗಳನ್ನು ಕುರಿತು ಅಜೀಂ ಪ್ರೇಂಜಿ ವಿವಿಯ ಪ್ರೊ.ಅಲೆಕ್ಸ್ ಥಾಮಸ್ ಹಾಗೂ ಪ್ರೊ.ರಾಜಾರಾಂ ನಿತ್ಯಾನಂದ ಮೊದಲ ದಿನದ ಉಪನ್ಯಾಸಗಳನ್ನು ನೀಡಲಿದ್ದಾರೆ.

ಎರಡನೇ ದಿನದ ಉಪನ್ಯಾಸವನ್ನು ಬೆಂಗಳೂರಿನ ಐಐಎಸ್‌ನ ಪ್ರೊ.ಡಿ.ಆರ್.ರಾವ್ ಮತ್ತು ಪ್ರೊ.ದೀಪಾಂಕರ್ ನೀಡಲಿದ್ದಾರೆ ಹಾಗೂ ಮೂರನೇ ದಿನ ಶಾಂತಿ ನೊಬೆಲ್ ಪ್ರಶಸ್ತಿ ವಿಜೇತರನ್ನು ಕುರಿತು ಸಾರ್ವಜನಿಕ ಆರೋಗ್ಯ ಫೌಂಡೇಷನ್ ಇಂಡಿಯಾ ಸಂಸ್ಥೆಯ ಡಾ.ಶ್ರೀಪರ್ಣಿಕಾ ಚಟ್ಟೋಪಾಧ್ಯ ಉಪನ್ಯಾಸ ನೀಡಲಿದ್ದು, ಡಾ.ಬಿ.ಯು.ಸುಮಾ, ಪ್ರೊ.ಜೋತ್ಸಾ ಲತಾ ಬೆಳ್ಳಿಯಪ್ಪ, ಡಾ.ಲತಾಮಣಿ, ಕುಮಾರಿ ಮಧುಭೂಷಣ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News