ಡೀನ್ ಹುದ್ದೆಯಿಂದ ಅಮಾನತುಗೊಂಡಿದ್ದ ಜೆಎನ್‍ಯು ಪ್ರೊಫೆಸರ್ ಕವಿತಾರಿಗೆ ಇನ್ಫೋಸಿಸ್ ಪ್ರಶಸ್ತಿ

Update: 2018-11-16 08:42 GMT

ಹೊಸದಿಲ್ಲಿ, ನ.16: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಆ್ಯಂಡ್ ಅಸ್ತೆಟಿಕ್ಸ್ ಡೀನ್ ಕವಿತಾ ಸಿಂಗ್  ಅವರಿಗೆ ಇನ್ಫೋಸಿಸ್ ಪ್ರಶಸ್ತಿ ಲಭಿಸಿದೆ. ಹಾಜರಿ ನಿಯಮಗಳನ್ನು ಪಾಲಿಸದೇ ಇದ್ದುದಕ್ಕೆ ಕವಿತಾ ಒಮ್ಮೆ ಡೀನ್ ಹುದ್ದೆಯಿಂದ ಅಮಾನತುಗೊಂಡಿದ್ದರಲ್ಲದೆ, ಅಕಾಡಮಿಕ್ ಕೌನ್ಸಿಲ್ ಸಭೆಗಳಲ್ಲಿ ಭಾಗವಹಿಸುವುದಕ್ಕೂ ಅವರ ಮೇಲೆ ನಿಷೇಧ ಹೇರಲಾಗಿತ್ತು.

ವಿಶ್ವವಿದ್ಯಾಲಯ ತಮ್ಮ ವಿರುದ್ಧ ಈಗಲೂ ಕಠಿಣ ನಿಲುವು ಹೊಂದಿದೆ ಹಾಗೂ ಫೆಲೋಶಿಪ್ ಪಡೆಯುವ ಉದ್ದೇಶದಿಂದ ರಜೆ ಕೋರಿದ್ದರೂ ಇನ್ನೂ ಅನುಮತಿ ನೀಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ವಿದೇಶದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗುವ ಅವಕಾಶ ದೊರೆತರೂ ಅದಕ್ಕೂ ಅನುಮತಿ ನಿರಾಕರಿಸಲಾಗಿದೆ ಎಂದೂ ಅವರು ದೂರಿದ್ದಾರೆ.

ಕಲಾ ಇತಿಹಾಸ ತಜ್ಞೆಯಾಗಿರುವ ಕವಿತಾ ಅವರಿಗೆ ಮುಘಲ್, ರಜಪೂತರ ಹಾಗೂ ಡೆಕ್ಕನ್ ಕಲೆಯ ವಿಷಯದಲ್ಲಿ ನಡೆಸಿದ ಅಧ್ಯಯನ ಹಾಗೂ  ವಸ್ತು ಸಂಗ್ರಹಾಲಯಗಳ ಪ್ರಾಮುಖ್ಯತೆಯ ಬಗೆಗಿನ ಅವರ ಬರಹಗಳಿಗಾಗಿ ಇನ್ಫೋಸಿಸ್ ಪ್ರಶಸ್ತಿ ನೀಡಲಾಗಿದೆ. ಆದರೆ ಅವರ ಸಂಸ್ಥೆಯ ಉಪಕುಲಪತಿಗಳಿಂದ ಹಿಡಿದು ಹಿರಿಯ ಅಧಿಕಾರಿಗಳ ತನಕ ಯಾರು ಕೂಡ ಇಲ್ಲಿಯ ತನಕ ಅಭಿನಂದನೆ ಸಲ್ಲಿಸಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News