ಭೀಮಾ-ಕೊರೆಗಾಂವ್ ವಿಚಾರಣೆ ಡಿ.3ಕ್ಕೆ ಮುಂದೂಡಿಕೆ

Update: 2018-11-16 17:28 GMT

ಹೊಸದಿಲ್ಲಿ, ನ.16: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಡಿಸೆಂಬರ್ 3ಕ್ಕೆ ಮುಂದೂಡಿದೆ. ಗುರುವಾರ ಪುಣೆ ಪೊಲೀಸರು ಐವರು ಬಂಧಿತ ಸಾಮಾಜಿಕ ಕಾರ್ಯಕರ್ತರಾದ ರೋಮಾ ವಿಲ್ಸನ್, ಶೋಮಾ ಸೇನ್, ಸುಧೀರ್ ಧವಳೆ, ಮಹೇಶ್ ರಾವತ್ ಹಾಗೂ ಸುರೇಂದ್ರ ಗಾಡ್ಲಿಂಗ್, ತಲೆತಪ್ಪಿಸಿಕೊಂಡಿರುವ ಆರೋಪಿಗಳಾದ ಕಮಾಂಡರ್ ದೀಪಕ್ ಮಿಲಿಂದ್ ತೇಲ್ತುಂಬ್ಡೆ, ಕಿಶಾಂದ ಪ್ರಶಾಂತ್ ಬೋಸ್, ಪ್ರಕಾಶ್ ನವೀನ್ ಗೋಸ್ವಾಮಿ, ಕಮಾಂಡರ್‌ಗಳಾದ ದೀಪು ಹಾಗೂ ಮಂಗ್ಲು ಸಹಿತ ಹತ್ತು ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು.

 ಎಲ್ಗರ್ ಪರಿಷದ್‌ಗೆ ನಡೆದ ಪ್ರಚಾರ ಕಾರ್ಯ ಹಾಗೂ ಎಲ್ಗರ್ ಪರಿಷದ್‌ನಲ್ಲಿ ಮಾಡಿದ ಭಾಷಣ ಭೀಮಾ ಕೊರೆಗಾಂವ್ ಹಿಂಸಾಚಾರವನ್ನು ಉಲ್ಬಣಗೊಳಿಸಿತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News