ದೇಶದ ಪ್ರಪ್ರಥಮ ಆನೆಗಳ ಆಸ್ಪತ್ರೆ ಕಾರ್ಯಾರಂಭ

Update: 2018-11-17 16:03 GMT

ಲಕ್ನೊ, ನ.17: ಆನೆಗಳಿಗೆ ಚಿಕಿತ್ಸೆ ನೀಡುವ ದೇಶದ ಪ್ರಪ್ರಥಮ ವಿಶೇಷ ಆಸ್ಪತ್ರೆಯನ್ನು ಉತ್ತರಪ್ರದೇಶದ ಮಥುರಾದಲ್ಲಿ ಆರಂಭಿಸಲಾಗಿದೆ.

 ವಯರ್‌ಲೆಸ್ ಡಿಜಿಟಲ್ ಎಕ್ಸ್-ರೇ ಸೌಲಭ್ಯ, ಲೇಸರ್ ಚಿಕಿತ್ಸೆ, ದಂತ ಚಿಕಿತ್ಸೆಯ ಎಕ್ಸ್‌ರೇ, ಅಲ್ಟ್ರಸೊನೊಗ್ರಫಿ, ಹೈಡ್ರೋಥೆರಪಿ ಮುಂತಾದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಆಸ್ಪತ್ರೆಯನ್ನು ಮಥುರಾದ ಚುರ್ಮುರಾ ಗ್ರಾಮದ ಫಾರಾ ಬ್ಲಾಕ್‌ನಲ್ಲಿ ಆಗ್ರಾ ಜಿಲ್ಲಾಧಿಕಾರಿ ಅನಿಲ್ ಕುಮಾರ್ ಉದ್ಘಾಟಿಸಿದರು. ಆನೆಗಳ ಸಂರಕ್ಷಣಾ ತಾಣದ ಸಮೀಪದಲ್ಲೇ ಆರಂಭವಾಗಿರುವ ಈ ಆಸ್ಪತ್ರೆಯಲ್ಲಿ ಅಸ್ವಸ್ಥ, ಗಾಯಗೊಂಡಿರುವ ಆನೆಗಳಿಗೆ ಚಿಕಿತ್ಸೆ ಒದಗಿಸಲಾಗುವುದು. ಆನೆಗಳನ್ನು ಮೇಲೆತ್ತುವ ಸೌಲಭ್ಯ, ಮದವೇರಿದ ಆನೆಗಳನ್ನು ಶಮನಗೊಳಿಸುವ ಸೌಲಭ್ಯಗಳನ್ನು ಹೊಂದಿರುವ ಇಲ್ಲಿ ಪಶುವೈದ್ಯ ವಿದ್ಯಾರ್ಥಿಗಳಿಗೆ ಆನೆಗಳ ವರ್ತನೆ ಹಾಗೂ ಅವುಗಳಿಗೆ ಚಿಕಿತ್ಸೆ ನೀಡುವ ಕ್ರಮವನ್ನು ದೂರದಿಂದ ನಿಂತು ನೋಡುವ ಸೌಕರ್ಯ ಕಲ್ಪಿಸಲಾಗಿದೆ. ಸರಕಾರೇತರ ಸಂಸ್ಥೆ ವೈಲ್ಡ್‌ಲೈಫ್ ಎಸ್‌ಒಎಸ್ ಈ ಆಸ್ಪತ್ರೆಯ ಪ್ರವರ್ತಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News