ಗೂಂಡಾ ಕಾಯ್ದೆ: ರೌಡಿಶೀಟರ್ ಮೊಯಿನ್ ಬಂಧನ

Update: 2018-11-17 16:59 GMT

ಬೆಂಗಳೂರು, ನ.17: ರೌಡಿಶೀಟರ್ ಮೊಯಿನ್ ಅನ್ನು ಉತ್ತರ ವಿಭಾಗದ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

23 ವರ್ಷದ ಮೊಯಿನ್, ನಗರದ ಆರ್‌ಎಂಸಿ ಯಾರ್ಡ್, ಪೀಣ್ಯ, ಯಶವಂತಪುರ, ಜೆಸಿ ನಗರ, ರಾಜಾಜಿನಗರ ಪೊಲೀಸ್ ಠಾಣೆಗಳಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಕೊಲೆ ಪ್ರಯತ್ನ, ಸುಲಿಗೆ, ದರೋಡೆ, ಹಲ್ಲೆ ಹಾಗೂ ಇತರೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮೊಯಿನ್, 2012ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, 20 ಪೊಲೀಸ್ ಠಾಣೆಗಳಲ್ಲಿ 36 ಪ್ರಕರಣಗಳು ದಾಖಲಾಗಿದ್ದವು. ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿರುವ ಕಾರಣದಿಂದ ಈತನನ್ನು ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News