ವಂಚನೆ ಪ್ರಕರಣ: ಐಐಟಿ ಅರ್ಧದಲ್ಲಿಯೇ ಬಿಟ್ಟವರೂ ಸೇರಿದಂತೆ 9 ಮಂದಿಯ ಬಂಧನ

Update: 2018-11-18 12:19 GMT

ಹೈದರಾಬಾದ್, ನ.18: ಮೂವತ್ತು ಕೋಟಿ ರೂಪಾಯಿಯ ಮಲ್ಟಿಲೆವೆಲ್ ಮಾರ್ಕೆಟಿಂಗ್ ವಂಚನೆ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಐಐಟಿ ಕಲಿಕೆಯನ್ನು ಅರ್ಧದಲ್ಲಿ ಮೊಟಕುಗೊಳಿಸಿದ ಯುವಕರು ಕೂಡ ವಂಚನೆ ತಂಡದಲ್ಲಿದ್ದಾರೆ.

ಇವರ ಬಗ್ಗೆ ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಶರೀರದ ತೂಕ ಹೆಚ್ಚಳದ ನಿಷೇಧಿತ ಔಷಧ ಸಹಿತ ಉತ್ಪನ್ನಗಳನ್ನು ಮಲ್ಟಿಲೆವೆಲ್ ಮಾರ್ಕೆಟಿಂಗ್ ಮೂಲಕ ಇವರು ಮಾರಾಟಮಾಡಿದ್ದು, ಮನಿಚೈನ್ ಮಾದರಿಯಲ್ಲಿ ವ್ಯಾಪಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  ವ್ಯಾಪಾರದಲ್ಲಿ ಭಾಗಿಯಾದವರು ಹೊಸ ಸದಸ್ಯರನ್ನು ಸೇರಿಸಿದಾಗ ಕಮಿಶನ್ ನೀಡುತ್ತಿದ್ದರು. ಇದೇ ವೇಳೆ ಕಂಪೆನಿಯ ವಿರುದ್ಧ ವ್ಯಾಪಕ ದೂರುಗಳು ಕೇಳಿ ಬಂದಿವೆ. ನಂತರ ಪೊಲೀಸರು ವಿವರವಾದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಂಪೆನಿ ಸಿಇಒ, ಇಬ್ಬರು ನಿರ್ದೇಶಕರ ಸಹಿತ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News