ಬಿಜೆಪಿ ನಾಯಕ ಸುರೇಂದ್ರನ್‌ಗೆ 14 ದಿನಗಳ ನ್ಯಾಯಾಂಗ ಬಂಧನ

Update: 2018-11-18 14:31 GMT

ತಿರುವನಂತಪುರ, ನ. 18: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳಲು ಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿರುವ ಬಿಜೆಪಿಯ ಕೇರಳ ಪ್ರಧಾನ ಕಾರ್ಯದಶಿ ಕೆ. ಸುರೇಂದ್ರನ್ ಅವರನ್ನು ಇಲ್ಲಿನ ಮ್ಯಾಜಿಸ್ಟ್ರೇಟರ್ ಅವರ ಮುಂದೆ ಹಾಜರುಪಡಿಸಲಾಗಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 ಶಬರಿಮಲೆಗೆ ತೆರಳುತ್ತಿದ್ದ ಸುರೇಂದ್ರನ್ ಹಾಗೂ ಇತರ ಇಬ್ಬರನ್ನು ‘ಇರುಮುಡಿಕೆಟ್ಟು’ನೊಂದಿಗೆ ನೀಲಕ್ಕಲ್‌ನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಶಬರಿಮಲೆಗೆ ತೆರಳದಂತೆ ಎಸ್‌ಪಿ ಯತೀಶ್ ಚಂದ್ರ ಮನವಿ ಮಾಡಿದ್ದರು. ಆದರೆ, ಸುರೇಂದ್ರನ್ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡು ಶನಿವಾರ ರಾತ್ರಿ ಚಿತ್ತಾರ್ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ರವಿವಾರ ಬೆಳಗ್ಗೆ ಅವರನ್ನು ಪತ್ತನಂತಿಟ್ಟ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅನಂತರ ಪತ್ತನಂತಿಟ್ಟ ನ್ಯಾಯಾಂಗ ಪ್ರಥಮ ದರ್ಜೆ ದಂಡಾಧಿಕಾರಿ ಅವರ ನಿವಾಸದಲ್ಲಿ ಹಾಜರು ಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News