12 ಸಾವಿರ ಬ್ರಾಡ್‌ಬಾಂಡ್ ಉಪಗ್ರಹಗಳ ಉಡಾವಣೆಗೆ ಎಫ್‌ಸಿಸಿ ಅಸ್ತು

Update: 2018-11-18 15:47 GMT

ಮಾಸ್ಕೊ,ನ.17: 2020ರೊಳಗೆ ನಿಸ್ತಂತು (ವೈರ್‌ಲೆಸ್) ಅಂತರ್ಜಾಲ ಸಂಪರ್ಕವು ಅತ್ಯಂತ ಅಗ್ಗದ ದರದಲ್ಲಿ ಲಭ್ಯವಾಗುವಂತೆ ಮಾಡಬಲ್ಲ ಸುಮಾರು 12 ಸಾವಿರ ಉಪಗ್ರಹಗಳ ಸಮೂಹವನ್ನು ಅಂತರಿಕ್ಷಕ್ಕೆ ಉಡಾವಣೆಗೊಳಿಸಲು ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್‌ಗೆ, ಅಮೆರಿಕದ ಫೆಡರಲ್ ಸಂವಹನ ಆಯೋಗ (ಎಫ್‌ಸಿಸಿ)ಗೆ ರವಿವಾರ ಅನುಮೋದನೆ ನೀಡಿದೆ.

ಕಳೆದ ಮಾರ್ಚ್‌ನಲ್ಲಿ ಎಫ್‌ಸಿಸಿಯು 4425 ಭೂಮಿಯ ಅಂತರಿಕ್ಷ ಕೆಳಮಟ್ಟಕ್ಕೆ ಉಡಾವಣೆಗೊಳಿಸಲು ಅನುಮತಿ ನೀಡಿತ್ತು ಹಾಗೂ ರವಿವಾರ ಅದು ಇನ್ನೂ 7518 ಉಪಗ್ರಹಗಳ ಉಡಾವಣೆಗೆ ತನ್ನ ಒಪ್ಪಿಗೆಯನ್ನು ನೀಡಿದೆಯೆಂದು ಸ್ಪುಟ್ಟಿಕ್ ಸುದ್ದಿ ಪತ್ರಿಕೆ ಶನಿವಾರ ವರದಿ ಮಾಡಿದೆ.

ಈ 11,943 ಉಪಗ್ರಹಗಳು, ಗಾತ್ರದಲ್ಲಿ 220 ಹಾಗೂ 1100 ಪೌಂಡ್‌ಗಳಷ್ಟಿದ್ದು, ಅವು ಅತಿವೇಗದ ಇಂಟರ್‌ನೆಟ್ ಸೇವೆಯನ್ನು ಒದಗಿಸುವುದಕ್ಕಾಗಿ ರೂಪಿಸಲಾದ ಸ್ಟಾರ್‌ಲಿಂಕ್ ಬ್ರಾಂಡ್‌ಬ್ಯಾಂಡ್ ನೆಟ್‌ವರ್ಕ್‌ನ ಪ್ರಸರಣ ವ್ಯಾಪ್ತಿಯನ್ನು ವಿಸ್ತಾರಗೊಳಿಸಲಿದೆ ಎಂದು ಎಫ್‌ಸಿಸಿ ಚೇರ್‌ಮನ್ ಅಜಿತ್ ಪೈ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News