ಕಳೆದ ವರ್ಷ ಕಾಣೆಯಾದ ಜಲಾಂತರ್ಗಾಮಿ ನೌಕೆ ಪತ್ತೆ

Update: 2018-11-18 15:51 GMT

ಬ್ಯುನೊಸ್ ಐರಿಸ್,ನ.17: ಕಳೆದ ವರ್ಷ ಅಟ್ಲಾಂಟಿಕ್ ಸಮುದ್ರದಲ್ಲಿ ಕಾಣೆ ಯಾಗಿದ್ದ 44 ಪ್ರಯಾಣಿಕರಿದ್ದ ಅರ್ಜೆಂಟೀನಾದ ಜಲಾಂತರ್ಗಾಮಿ ನೌಕೆಯನ್ನು ಪತ್ತೆಹಚ್ಚಲಾಗಿದೆ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.

ನಾಪತ್ತೆಯಾಗಿದ್ದ ಎಆರ್‌ಎ ಸ್ಯಾನ್‌ಜುವಾನ್‌ನನ್ನು ಅಟ್ಲಾಂಟಿಕ್ ಸಾಗರದಲ್ಲಿ 800 ಮೀಟರ್ ಆಳದಲ್ಲಿ ಪತ್ತೆಹಚ್ಚಲಾಗಿದೆಯೆಂದು ಅರ್ಜೆಂಟೀನಾ ನೌಕಾಪಡೆಯು ಟ್ವಿಟರ್‌ನಲ್ಲಿ ತಿಳಿಸಿದೆ.

ಅಮೆರಿಕದ ನೌಕಾಶೋಧಕ ಸಂಸ್ಥೆ ಓಶಿಯನ್ ಇನ್ಫಿನಿಟಿ ಒಡೆತನದ ಸೀಬೆಡ್ ಕನ್ಸ್‌ಟ್ರಕ್ಟರ್ ಈ ಶೋಧವನ್ನು ಮಾಡಿದೆ. ಸ್ಯಾನ್‌ಜುವಾನ್‌ನನ್ನು ಪತ್ತೆಹಚ್ಚುವ ಹೊಸ ಪ್ರಯತ್ನವನ್ನು ಅದು ಸೆಪ್ಟೆಂಬರ್‌ನಲ್ಲಿ ಆರಂಭಿಸಿತ್ತು.

ನೌಕಾಪಡೆಯು 2017ರ ನವೆಂಬರ್ 15ರಂದು ಸ್ಯಾನ್‌ಜುವಾನ್ ಜೊತೆ ತನ್ನ ಸಂಪರ್ಕವನ್ನು ಕಡಿದುಕೊಂಡಿತ್ತು.ಅಟಾಂಟಿಕ್ ಸಮುದ್ರದಲ್ಲಿ ದೇಶದ ದಕ್ಷಿಣದ ತುದಿಯಿಂದ ಉತ್ತರಾಭಿಮುಖವಾಗಿ ಪ್ರಯಾಣಿಸುತ್ತಿದ್ದ ನೌಕೆಯು ಅರ್ಜೆಂಟೀನಾ ಕರಾವಳಿಯಿಂದ 450 ಕಿ.ಮೀ. ದೂರದಲ್ಲಿ ನೌಕಾಪಡೆಯ ಜೊತೆ ಸಂಪರ್ಕವನ್ನು ಕಡಿದುಕೊಂಡಿತ್ತು.

ಸ್ಯಾನ್‌ಜುವಾನ್ ನೌಕೆಯ ನಾಪತ್ತೆಯ ಪ್ರಥಮ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸ್ಯಾನ್‌ಜುವಾನ್‌ನ ಹಡಗಿನ ನೌಕಾನೆಲೆಯಾದ ಮಾರ್ ಡೆಲ್ ಪ್ಲಾಟಾದಲ್ಲಿ ಅರ್ಜೆಂಟೀನಾ ಅಧ್ಯಕ್ಷ ವೌರಿಸಿಯೊ ಮಾಕ್ರಿ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದ ಮರುದಿನವೇ ಈ ಜಲಾಂತರ್ಗಾಮಿ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News