ಸತ್ಯ ಮುಂದಿಟ್ಟು ವಿಹಿಂಪ ನಾಯಕನ ಬೆವರಿಳಿಸಿದ ನಿರೂಪಕಿ

Update: 2018-11-19 10:09 GMT

ಹೊಸದಿಲ್ಲಿ,ನ.19 : ರವಿವಾರ ನ್ಯೂಸ್ 24 ವಾಹಿನಿಯಲ್ಲಿ 'ಸಬ್ಸೇ ಬಡಾ ಸವಾಲ್' ಕಾರ್ಯಕ್ರಮದಲ್ಲಿ ನಿರೂಪಕಿ ಸಾಕ್ಷಿ ಜೋಷಿ ವಿಹಿಂಪ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾರ್ ಅವರ ಬೆವರಿಳಿಸಿದ ಘಟನೆ ನಡೆದಿದೆ. ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ತಮ್ಮನ್ನು ಗೋರಕ್ಷಕರೆಂಬಂತೆ ಬಿಂಬಿಸಿರುವ ಸುತ್ತ ಚರ್ಚೆ ನಡೆದಿತ್ತು.

ಬೀಫ್ ಸೇವನೆ ಕುರಿತಂತೆ ಎರಡೂ ಪಕ್ಷಗಳು ಹೊಂದಿರುವ ಇಬ್ಬಗೆ ನೀತಿಯ ವಿಚಾರದಲ್ಲಿ ಎರಡೂ ಪಕ್ಷಗಳನ್ನು ಕಾರ್ಯಕ್ರಮದಲ್ಲಿ ಜೋಷಿ ತರಾಟೆಗೆ ತೆಗೆದುಕೊಂಡಿದ್ದರು. "ಗೋವು ಗೋವಾ ಮತ್ತು ಈಶಾನ್ಯ ಭಾರತದಲ್ಲಿ ಯಮ್ಮಿ ಆಗಿದ್ದರೆ, ಮಧ್ಯ ಪ್ರದೇಶದಲ್ಲಿ ಮಮ್ಮಿ ಆಗಿದೆ, ಕಾಂಗ್ರೆಸ್ ಪಕ್ಷಕ್ಕೂ ಇದು ಅನ್ವಯಿಸುತ್ತದೆ, ಮಧ್ಯ ಪ್ರದೇಶದಲ್ಲಿ ಮಮ್ಮಿ, ಕೇರಳದಲ್ಲಿ ಯಮ್ಮಿ,'' ಎಂದು ಜೋಷಿ ಹೇಳಿದರು.

ಬೀಫ್ ಸೇವನೆ ಕುರಿತಂತೆ ಕೇಂದ್ರ ಸಚಿವ ಕಿರೆನ್ ರಿಜಿಜು ಹೇಳಿಕೆ ಬಗ್ಗೆ ವಿಹಿಂಪದ ವಿನೋದ್ ಬನ್ಸಾಲ್ ಅವರನ್ನು ಪ್ರಶ್ನಿಸಿದಾಗ, ಆಕೆ ವಾಟ್ಸ್ಯಾಪ್‍ನಲ್ಲಿ  ಬಂದ ವರದಿಗಳನ್ನು ಉಲ್ಲೇಖಿಸುತ್ತಿದ್ದಾರೆಂದು ಬನ್ಸಾಲ್ ಆರೋಪಿಸಿದರು. ಇದನ್ನು ನಿರಾಕರಿಸಿದ ನಿರೂಪಕಿ "ನಾನು ವಾಟ್ಸ್ಯಾಪ್ ವರದಿಗಳನ್ನು ಉಲ್ಲೇಖಿಸುವುದಿಲ್ಲ, ಇತರರು ಹಾಗೆ ಮಾಡುತ್ತಿದ್ದಿರಬಹುದು, ಟ್ರೋಲ್‍ಗಳು ಹಾಗೆ ಮಾಡುತ್ತಾರೆ,'' ಎಂದರು. ನಂತರ ಒಂದು ಧ್ವನಿಮುದ್ರಿಕೆ ಪ್ರಸ್ತುತ ಪಡಿಸಿದರಲ್ಲದೆ ಅದರಲ್ಲಿ ರಿಜಿಜು "ನಾನು ಬೀಫ್ ತಿನ್ನುತ್ತೇನೆ, ನಾನು ಅರುಣಾಚಲ ಪ್ರದೇಶದವ. ನನ್ನನ್ನು ಯಾರಾದರೂ ನಿಲ್ಲಿಸಬಲ್ಲರೇನು?'' ಎಂದು ಪ್ರಶ್ನಿಸುತ್ತಿರುವುದು ಕೇಳಿಸುತ್ತದೆ.

ಹೀಗೆ ನಯವಾಗಿ ಮಾತನಾಡಿ ಹಾಗೂ ಧ್ವನಿಮುದ್ರಿಕೆ ಕೇಳಿಸುವ ಮೂಲಕ ನಿರೂಪಕಿ ಸಾಕ್ಷಿ ಜೋಷಿ ಅವರು ವಿಹಿಂಪ ನಾಯಕನ ತಪ್ಪನ್ನು ಎತ್ತಿ ತೋರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News