ಸಕಾಲ ವ್ಯಾಪ್ತಿಗೆ ಅಬಕಾರಿ ಇಲಾಖೆ ಸೇರ್ಪಡೆ

Update: 2018-11-19 13:52 GMT

ಬೆಂಗಳೂರು, ನ.19: ಅಬಕಾರಿ ಇಲಾಖೆಯಲ್ಲಿನ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಸಕಾಲ ವ್ಯಾಪ್ತಿಗೆ ಅಬಕಾರಿ ಇಲಾಖೆಯನ್ನು ಸೇರ್ಪಡೆ ಮಾಡಲಾಗಿದೆ.

ಅಬಕಾರಿ ಇಲಾಖೆಯಲ್ಲಿನ ವಿವಿಧ 38 ಸೇವೆಗಳನ್ನು ಪಡೆಯಲು ಸಕಾಲದಲ್ಲಿ ಅರ್ಜಿ ಸಲ್ಲಿಸಬೇಕಿದೆ. ಯಾವ ಸೇವೆಗೆ ಯಾವ ಅಧಿಕಾರಿ, ಎಷ್ಟು ದಿನದೊಳಗೆ ಅರ್ಜಿ ವಿಲೇವಾರಿ ಸೇರಿ ಇತರ ಅಂಶಗಳನ್ನು ಸಕಾಲದಲ್ಲಿ ನೀಡಲಾಗಿದೆ.

ಇಲಾಖೆಯ ಸೇವೆಗಳನ್ನು ಪಡೆಯಲು ಸಾಕಷ್ಟು ಬಾರಿ ಅಲೆದಾಡಿದ್ದರೂ ಲಂಚ ನೀಡದಿದ್ದರೆ ಕೆಲಸಗಳು ಆಗುತ್ತಿರಲಿಲ್ಲ. ಅಬಕಾರಿ ಇಲಾಖೆಯನ್ನು ಈಗ ಸಕಾಲ ವ್ಯಾಪ್ತಿಗೆ ತಂದಿದ್ದರಿಂದ ನಮಗೆ ತುಂಬ ಅನುಕೂಲವಾಗುತ್ತದೆ ಎಂದು ಮದ್ಯದ ಅಂಗಡಿಗಳ ಮಾಲಕರು ಹೇಳುತ್ತಿದ್ದಾರೆ.

ಏನೇನು ಸೇವೆಗಳು?: ನವೀಕರಣ ಮತ್ತು ವರ್ಗಾವಣೆ, ಮದ್ಯಸಾರ ಆಮದಿಗೆ, ರಫ್ತಿಗೆ ನಿರಾಕ್ಷೇಪಣಾ ಪತ್ರ, ಮದ್ಯ ರಫ್ತು (ವಿದೇಶಕ್ಕೆ) ಸಹಮತಿ ಪತ್ರ, ವೈನ್ ರಫ್ತು(ವಿದೇಶಕ್ಕೆ) ಸಹಮತಿ ಪತ್ರ, ಸ್ಥಳೀಯ ಲೇಬಲ್ ಅನುಮೋದನೆ, ಡಿಪಿ, ಎಂಆರ್‌ಪಿ ಮತ್ತು ಆರ್‌ಎಂಆರ್‌ಪಿ, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಹೊರ ರಾಜ್ಯದ ಲೇಬಲ್ ಅನುಮೊದನೆ, ಕಾಕಂಬಿ ಸನ್ನದು, ರಾಜ್ಯದಲ್ಲಿ ಕಾಕಂಬಿ ಎತ್ತುವಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರ, ನೀಲಿನಕ್ಷೆ ಅನುಮೋದನೆ ಸೇರಿ 38 ಸೇವೆಗಳನ್ನು ಪಡೆಯಲು ಅರ್ಜಿದಾರರು ಸಕಾಲದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News