ಬೆಂಗಳೂರು: ಜೂಜಾಟ ಅಡ್ಡೆ ಮೇಲೆ ದಾಳಿ; 25 ಜನರ ಬಂಧನ

Update: 2018-11-19 16:00 GMT

ಬೆಂಗಳೂರು, ನ.19: ಹಣವನ್ನು ಪಣವಾಗಿಟ್ಟುಕೊಂಡು ಡಾಟ್‌ಗೇಮ್ ಎಂಬ ಜೂಜಾಟವಾಡುತ್ತಿದ್ದ ಕೇಂದ್ರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 25 ಮಂದಿಯನ್ನು ಬಂಧಿಸಿ 13,930 ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಶೇಷಾದ್ರಿಪುರಂ ವ್ಯಾಪ್ತಿಯಲ್ಲಿನ ಬಾಲಾಜಿ ಮೆಂಬರ್ಸ್‌ ಕ್ಲಬ್‌ನಲ್ಲಿ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಜೂಜಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರಿಂದ 884 ಟೋಕನ್‌ಗಳು, ಡಾಟ್‌ಬೋರ್ಡ್, 13,930ರೂ. ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಶೇಷಾದ್ರಿಪುರಂ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News