ಸಿದ್ದಗಂಗಾ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

Update: 2018-11-19 16:09 GMT

ಬೆಂಗಳೂರು, ನ. 19: ಸಿದ್ದಗಂಗಾ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಣೆ ಮಾಡಲಾಯಿತು.      

ಕಿರುತೆರೆ ನಟ ಡಾ.ಚಿಕ್ಕ ಹೆಜ್ಜಾಜಿ ಮಹಾದೇವ್‌ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಡಿನ ಸ್ವಾತಂತ್ರ ಯೋಧರು ಹಾಗೂ ಭಾಷೆ ಹಿರಿಮೆಯ ಕುರಿತು ಮಾತನಾಡಿ ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಮೂಡಿಸಿದರು. ಅರಿಶಿನ ಕುಂಕುಮ ವರ್ಣದ ಅಲಂಕಾರದಿಂದ ಶೋಭಿಸುವ ವೇದಿಕೆಯಲ್ಲಿ ಕನ್ನಡ ನಾಡು, ನುಡಿ, ಇತಿಹಾಸ, ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನ ಮುಟ್ಟುವಂತಿದ್ದವು.

ಕಾರ್ಯಕ್ರಮದಲ್ಲಿ ನಿವೃತ್ತ ಪೋಲಿಸ್ ಮಹಾ ನಿರ್ದೇಶಕ ರೇವಣ್ಣಸಿದ್ಧಯ್ಯರವರು ಮಕ್ಕಳ ಕೌಶಲ್ಯ, ಪ್ರತಿಭೆಯನ್ನು ಶ್ಲಾಘಿಸಿ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News