2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಸುಶ್ಮಾ ಸ್ವರಾಜ್ ನಿರ್ಧಾರ

Update: 2018-11-20 09:24 GMT

ಹೊಸದಿಲ್ಲಿ, ನ.20: ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಅತ್ಯಂತ ಹಿರಿಯ ನಾಯಕಿ, ಕೇಂದ್ರ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಈ ತಿಂಗಳಾಂತ್ಯದಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಮಧ್ಯಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಈ ವಿಚಾರವನ್ನು ಹಂಚಿಕೊಂಡರು.

‘‘ಈ ಕುರಿತು ಪಕ್ಷ ನಿರ್ಧರಿಸುತ್ತದೆ. ಆದರೆ, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಮಾನಸಿಕವಾಗಿ ಸಿದ್ಧವಾಗಿದ್ದೇನೆ’’ ಎಂದು 66ರ ಹರೆಯದ ಸುಶ್ಮಾ ಇಂದೋರ್‌ನಲ್ಲಿ ತಿಳಿಸಿದರು.

ಭೋಪಾಲ್‌ನಿಂದ 56 ಕಿ.ಮೀ.ದೂರದಲ್ಲಿರುವ ವಿದಿಶಾ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಸುಶ್ಮಾ ಆರೋಗ್ಯ ಸಂಬಂಧಿ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

2016ರಲ್ಲಿ ಕಿಡ್ನಿ ಕಸಿಗೆ ಒಳಗಾಗಿದ್ದ ಸುಶ್ಮಾ ಸ್ವರಾಜ್ ಕೆಲವು ತಿಂಗಳ ಕಾಲ ತನ್ನ ಕಚೇರಿ ಕೆಲಸದಿಂದ ದೂರ ಉಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News