ಡಿ.2ರಿಂದ ಅಂತರ್‌ರಾಷ್ಟ್ರೀಯ ಮಹಿಳಾ ವಿಮೋಚನಾ ವಿಚಾರ ಸಂಕಿರಣ

Update: 2018-11-23 12:52 GMT

ಬೆಂಗಳೂರು, ನ.23: ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ವತಿಯಿಂದ ಮಹಿಳಾ ವಿಮೋಚನೆ ಕುರಿತ ಅಂತರ್‌ರಾಷ್ಟ್ರೀಯ ಸೈದ್ಧಾಂತಿಕ ವಿಚಾರ ಸಂಕಿರಣವನ್ನು ಡಿ.2ರಿಂದ ಮೂರು ದಿನಗಳವರೆಗೆ ಸ್ಫೂರ್ತಿಧಾಮದಲ್ಲಿ ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಶರ್ಮಿಸ್ಥಾ ಚೌಧರಿ, ಏಷ್ಯಾ, ಪಶ್ಚಿಮ ಏಷ್ಯಾ, ಆಫ್ರಿಕಾ, ಯುರೋಪ್, ಮತ್ತು ಲ್ಯಾಟಿನ್ ಅಮೆರಿಕಾದಿಂದ ಹಾಗೂ ಹದಿನೈದು ರಾಜ್ಯಗಳಿಂದ ಇನ್ನೂರಕ್ಕೂ ಹೆಚ್ಚು ಮಂದಿ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ದಬ್ಬಾಳಿಕೆ ವಿರೋಧಿಸಿ ಸಮಾನತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಭಾರತದ ಗೌರಿ ಲಂಕೇಶ್, ಕುರ್ದಿಸ್ತಾನ್‌ನ ಸಕೀನೇ ಕ್ಯಾನ್ಸಿಜ್ ಸಂಘಟನೆಯ ಭಾಗವಾಗಿದ್ದರು ಎಂದು ತಿಳಿಸಿದರು.

ಸರ್ವೇಯೊಂದರ ಪ್ರಕಾರ 2018ರಲ್ಲಿ ಭಾರತ ಮಹಿಳೆಯರ ಅಸುರಕ್ಷತೆ ದೇಶಗಳ ಮೊದಲ ಸಾಲಿನಲ್ಲಿದೆ. ಮಹಿಳೆಯರ ಮೇಲಿನ ಹಿಂಸೆ ವಿಸ್ತಾರಗೊಂಡು, ಇದು ಜಾಗತಿಕ ಆರೋಗ್ಯ ಸಮಸ್ಯೆಯಾಗಿ ಇದರ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಜಗತ್ತಿನ ಯಾವೊಂದು ರಾಷ್ಟ್ರವೂ ಈ ಬೆಳವಣಿಗೆಯ ಕುರಿತು ಚರ್ಚಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಚಾರ ಸಂಕಿರಣ ಸಂಕುಚಿತ ಪ್ರವೃತ್ತಿಯಾದರು ಇದೊಂದು, ಅಸಮಾನತೆ, ಅನ್ಯಾಯ ಹಾಗೂ ಶೋಷಣೆಯ ವಿರುದ್ಧ ಗೆಲುವು ಸಾಧಿಸುವ ಸಲುವಾಗಿ ಸಂಘಟಿತವಾಗಿರುವ ಪ್ರಯತ್ನವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News