ನ. 28ರಂದು ರಾಹುಲ್‌ ಜೊತೆಗೆ ಚಂದ್ರಬಾಬು ನಾಯ್ಡು ಚುನಾವಣಾ ಪ್ರಚಾರ

Update: 2018-11-23 14:40 GMT

ಹೈದರಾಬಾದ್, ನ. 23: ತೆಲಂಗಾಣ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮುಂದಿನ ವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ. ನವೆಂಬರ್ 28 ಹಾಗೂ 29ರಂದು ನಾಯ್ಡು ಅವರು ರಾಹುಲ್ ಗಾಂಧಿ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಪಿಐ ಹಾಗೂ ತೆಲಂಗಾಣ ಜನ ಸಮಿತಿ ಕೂಡ ಒಳಗೊಂಡಿರುವ ಮಹಾ ಮೈತ್ರಿಯ ಒಂದು ಭಾಗವಾಗಿರುವ ಟಿಡಿಪಿ ಹಾಗೂ ಕಾಂಗ್ರೆಸ್ ತೆಲಂಗಾಣದಲ್ಲಿ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಬಿಜೆಪಿ ವಿರೋಧಿ ಮೈತ್ರಿ ರೂಪಿಸುವಲ್ಲಿ ಶ್ರಮವಹಿಸಿದ ನಾಯ್ಡು ಅವರು ಈ ತಿಂಗಳು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ನಡುವೆ, ಮೆಡ್ಚಾಲ್‌ನಲ್ಲಿ ಶುಕ್ರವಾರ ನಡೆದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಾರ್ವಜನಿಕ ರ್ಯಾಲಿಯಲ್ಲಿ ಟಿಡಿಪಿ ಹಾಗೂ ಇತರ ಮಿತ್ರಪಕ್ಷಗಳು ಪಾಲ್ಗೊಂಡಿದ್ದವು. ರಾಜ್ಯ ಸಂಪುಟದ ಶಿಫಾರಸಿನಂತೆ ಸೆಪ್ಟಂಬರ್ 6ರಂದು ತೆಲಂಗಾಣ ಶಾಸನ ಸಬೆಯಲ್ಲಿ ಅವಧಿಪೂರ್ವ ವಿಸರ್ಜಿಸಲಾಗಿತ್ತು. ವಿಧಾನ ಸಭೆ ಚುನಾವಣೆ ಡಿಸೆಂಬರ್ 7ರಂದು ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 11ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News