ರಾಜ್ಯದಲ್ಲಿ ಬರ ಛಾಯೆ: ಸಮರ್ಪಕವಾಗಿ ಪರಿಸ್ಥಿತಿ ನಿಭಾಯಿಸಲು ಡಿಸಿಎಂ ಸೂಚನೆ

Update: 2018-11-27 07:10 GMT

ಬೆಂಗಳೂರು, ನ.27: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೂಚಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಕರೆದಿದ್ದ ಜಿಲ್ಲಾಧಿಕಾರಗಳ ಹಾಗೂ ಸಿಇಒಗಳ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು‌ ನೆರೆ ಸ್ಥಿತಿಯಿಂದ ಒಟ್ಟು 4 ಸಾವಿರ ಕೋಟಿ‌ ರೂ. ನಷ್ಟ ಉಂಟಾಗಿದೆ. ಇದರಲ್ಲಿ 546 ಕೋಟಿ ರೂ. ಮಾತ್ರ ಕೇಂದ್ರ ನೀಡಿದೆ. ಸದ್ಯ ರಾಜ್ಯದಲ್ಲಿ 100 ತಾಲೂಕುಗಳಲ್ಲಿ ಬರಗಾಲ ಎಂದು ಘೋಷಿಸಲಾಗಿದೆ. ಇನ್ನು ಕೆಲ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಲಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಜನಸಾಮಾನ್ಯರು ವಿಧಾನಸೌಧಕ್ಕೇ ಬರುವುದನ್ನು ತಪ್ಪಿಸಿ ಜಿಲ್ಲಾಧಿಕಾರಿಗಳೇ ಅವರ ಸಮಸ್ಯೆ ಆಲಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News