ಶಬರಿಮಲೆ ಪ್ರವೇಶಕ್ಕೆ ಯತ್ನಿಸಿ ಸುದ್ದಿಯಾಗಿದ್ದ ರೆಹಾನಾ ಫಾತಿಮಾ ಬಂಧನ

Update: 2018-11-27 15:08 GMT

ತಿರುವನಂತಪುರ, ನ.27: ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಬರಹವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಘಾಸಿ ಎಸಗಿರುವ ಆರೋಪದಲ್ಲಿ ಕೇರಳದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾರನ್ನು ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಫಾತಿಮಾ ವಿರುದ್ಧ ಸೆಕ್ಷನ್ 295(ಎ)ಯಡಿ ಪ್ರಕರಣ ದಾಖಲಾಗಿದ್ದು ಅವರನ್ನು ಶೀಘ್ರವೇ ಮ್ಯಾಜಿಸ್ಟ್ರೇಟರೆದುರು ಹಾಜರುಪಡಿಸಲಾಗುವುದು ಎಂದು ಪಟ್ಟಣಂಥಿಟ್ಟ ಪೊಲೀಸ್ ಠಾಣಾಧಿಕಾರಿ ಜಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಫಾತಿಮಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಅವರನ್ನು ಬಂಧಿಸಲಾಗಿದೆ.

ಎಲ್ಲಾ ವಯೋಮಾನದ ಮಹಿಳೆಯರೂ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ಕಳೆದ ತಿಂಗಳು ಅಕ್ಟೋಬರ್ 19ರಂದು ರೆಹಾನಾ ಫಾತಿಮಾ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ನಡೆಸಿದ ಪ್ರಯತ್ನವನ್ನು ಪ್ರತಿಭಟನಾಕಾರರು ತಡೆದಿದ್ದರು. ರೆಹಾನಾ ಫಾತಿಮಾ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ನಡೆಸಿದ ಪ್ರಯತ್ನ ಭಾರೀ ವಿವಾದಕ್ಕೆ ಕಾರಣವಾಗಿತ್ತು ಮತ್ತು ದೇವಸ್ಥಾನವನ್ನು ಯಾವುದೇ ಕ್ರಿಯಾವಾದ (ಅ್ಯಕ್ಟಿವಿಸಮ್)ದ ಸ್ಥಳವನ್ನಾಗಿಸಲು ಅವಕಾಶ ನೀಡಬಾರದೆಂದು ಟ್ರಾವಂಕೋರ್ ದೇವಸ್ವಂ ಬೋರ್ಡ್(ಟಿಡಿಬಿ) ಕೇರಳ ಸರಕಾರವನ್ನು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News