ಸಜ್ಜಾದ್ ಲೋನ್ ರನ್ನು ಸಿಎಂ ಮಾಡಬೇಕೆಂದು ಮೋದಿ ಸರಕಾರ ಬಯಸಿತ್ತು: ಜಮ್ಮು ಕಾಶ್ಮೀರ ರಾಜ್ಯಪಾಲ

Update: 2018-11-27 11:36 GMT

ಶ್ರೀನಗರ್, ನ.27: ಕಳೆದ ವಾರ ತಾನು ಜಮ್ಮು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸುವುದಕ್ಕಿಂತ ಮೊದಲು ಸಜ್ಜಾದ್ ಲೋನ್ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿಸಬೇಕೆಂದು ಮೋದಿ ಸರಕಾರ ಬಯಸಿತ್ತೆಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ತಾನು ದಿಲ್ಲಿಯ ಮಾತುಗಳನ್ನು ಕೇಳಿದ್ದರೆ ಸಜ್ಜಾದ್ ಲೋನ್ ಅವರನ್ನೇ ಮುಖ್ಯಮಂತ್ರಿಯಾಗಿಸಬೇಕಿತ್ತು ಹಾಗೂ ಸದಾ ಅಪ್ರಾಮಾಣಿಕವಾಗಿರಬೇಕಾಗಿತ್ತೆಂದು ನವೆಂಬರ್ 24ರಂದು ಗ್ವಾಲಿಯರ್‍ನಲ್ಲಿ ನಡೆದ ಸಮಾರಂಭದಲ್ಲಿ ಮಲ್ಲಿಕ್ ಹೇಳಿದ್ದರು.

ಆದರೆ ಇಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಅವರು ಕೇಂದ್ರದಿಂದ ರಾಜಕೀಯ ಒತ್ತಡ ಅಥವಾ ಯಾವುದೇ ಹಸ್ತಕ್ಷೇಪವಿಲ್ಲ ಹಾಗೂ ತಾವು ಸಂಪೂರ್ಣ ರಾಜಕೀಯೇತರವಾಗಿ ಕಾರ್ಯಾಚರಿಸುತ್ತಿರುವುದಾಗಿ ತಿಳಿಸಿದರು.

ಹೊಸ ಸರಕಾರ ರಚಿಸಲು ಹಕ್ಕು ಮಂಡಿಸಿದವರಲ್ಲಿ ಲೋನೆ ಮೊದಲಿಗರಾಗಿದ್ದರು, ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಸರಕಾರ ರಚಿಸುವ ವಿಚಾರದಲ್ಲಿ ಗಂಭೀರವಾಗಿರಲಿಲ್ಲ ಹಾಗೂ ವಿಧಾನಸಭೆ ವಿಸರ್ಜಿಸುವುದನ್ನು ಬಯಸಿದ್ದರು ಎಂದು ಮಲಿಕ್ ಹೇಳಿದರು

ಮಲಿಕ್ ಮೇಲೆ ಯಾವುದೇ ಒತ್ತಡವಿಲ್ಲ, ಸುದ್ದಿಯಲ್ಲಿರಲು ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಬಿಜೆಪಿ ನಾಯಕ ಹಾಗೂ ಮಾಜಿ ಡೆಪ್ಯುಟಿ ಸೀಎಂ ಕವೀಂದರ್ ಗುಪ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News