ಮಧ್ಯಪ್ರದೇಶ: ಮತದಾನ ಮುಗಿದು 2 ದಿನಗಳ ನಂತರ ಸಂಗ್ರಹ ಕೇಂದ್ರ ತಲುಪಿದ ಇವಿಎಂಗಳು

Update: 2018-12-01 09:30 GMT

ಭೋಪಾಲ್, ಡಿ.1: ಮಧ್ಯ ಪ್ರದೇಶದಲ್ಲಿ ಬುಧವಾರ ಮತದಾನ ಮುಗಿದು ಬರೋಬ್ಬರಿ 48 ಗಂಟೆಗಳ ನಂತರ ಇವಿಎಂ ಸಂಗ್ರಹ ಕೇಂದ್ರಕ್ಕೆ ಮತದಾನ ಯಂತ್ರಗಳು ಆಗಮಿಸಿದ ವಿಚಾರದಲ್ಲಿ ವಿವಾದವೊಂದು ಏರ್ಪಟ್ಟಿದೆ.

ಮಧ್ಯ ಪ್ರದೇಶ ಗೃಹ ಸಚಿವ ಭುಪೇಂದ್ರ ಸಿಂಗ್ ಅವರ ಕ್ಷೇತ್ರವಾದ ಖುರೈ ಎಂಬಲ್ಲಿನ ಪೊಲೀಸ್ ಠಾಣೆಯಲ್ಲಿ ಈ ಇವಿಎಂಗಳನ್ನು ಇರಿಸಲಾಗಿತ್ತೆಂದು ಹೇಳಲಾಗಿದೆ. ಸಿಂಗ್ ಅವರು ಕಾಂಗ್ರೆಸ್ ಪಕ್ಷದ ಅರುಣೋದಯ್ ಚೌಬೆ ವಿರುದ್ಧ ಸ್ಪರ್ಧಿಸಿದ್ದಾರೆ.

ಮತ ಎಣಿಕೆ ದಿನದ ತನಕ ಇವಿಎಂ ಸಂಗ್ರಹ ಕೇಂದ್ರದಲ್ಲಿರಬೇಕಾದ ಇವಿಎಂಗಳನ್ನು ಭೂಪೇಂದ್ರ ಸಿಂಗ್ ಒಡೆತನದ ಹೋಟೆಲ್ ಒಂದಕ್ಕೆ ತೆಗೆದುಕೊಂಡು ಹೋಗಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಘಟನೆಯ ಬಗ್ಗೆ ತನಿಖೆಗೆ ಹಾಗೂ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಇವಿಎಂ ಸಂಗ್ರಹ ಕೇಂದ್ರದೆದುರು ಪ್ರತಿಭಟನೆ ನಡೆಸಿದ್ದಾರೆ. ಫಲಿತಾಂಶ ತಿರುಚಲು ಆಡಳಿತ ಬಿಜೆಪಿ ಯತ್ನಿಸುತ್ತಿದೆ ಎಂದು ಪ್ರತಿಭಟನಕಾಕಾರರು ಆರೋಪಿಸಿದ್ದಾರೆ.

``ಮಧ್ಯ ಪ್ರದೇಶದ ಗೃಹ ಸಚಿವರ ಕ್ಷೇತ್ರದಲ್ಲಿ ಇವಿಎಂಗಳನ್ನು ನಂಬರ್ ಪ್ಲೇಟ್ ಇಲ್ಲದ ಬಸ್ಸಿನಲ್ಲಿರಿಸಲಾಗಿತ್ತು. ಬಿಜೆಪಿ ಗೆಲುವಿಗೆ ಇದು ಸರಕಾರದ ಸಂಚೇ?'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಆದರೆ ರಾಜ್ಯ ಮುಖ್ಯ ಚುನಾವಣಾDiಕಾರಿ ಮಾತ್ರ ಈ ಇವಿಎಂಗಳನ್ನು ಮತದಾನಕ್ಕೆ ಉಪಯೋಗಿಸಲಾಗಿಲ್ಲ, ಆಗತ್ಯ ಬಿದ್ದರೆ  ಹಾಗೂ ಯಾವುದಾದೂ ಯಂತ್ರ ಕೈಕೊಟ್ಟರೆ ಉಪyOಗಕ್ಕೆಂದು ಇರಿಸಲಾಗಿತ್ತು ಎಂದು ಹೇಳಿದ್ದಾರೆ. ಇಂತಹ 34 ಇವಿಎಂಗಳಿವೆ ಎನ್ನಲಾಗಿದೆ. ``ಇಂತಹ ಇವಿಎಂಗಳನ್ನು ಪೊಲೀಸ್ ಠಾಣೆಗಳಲ್ಲಿರಿಸಲಾಗಿತ್ತು, ಆದರೆ ಮತದಾನಕ್ಕೆ ಉಪಯೋಗಿಸಲಾದ ಇವಿಎಂಗಳನ್ನು ಸ್ಟ್ರಾಂಗ್ ರೂಮಿನಲ್ಲಿರಿಸಲಾಗಿದ್ದು ಅವುಗಳನ್ನು ತೆರೆಯಲಾಗಿಲ್ಲ ಹಾಗೂ ಅದು ಸಾಧ್ಯವೂ ಇಲ್ಲ,'' ಎಂದು ಮುಖ್ಯ ಚುನಾವಣಾ ಆಯುಕ್ತರು ಟ್ವೀಟ್ ಮಾಡಿದ್ದಾರೆ.

ಇವಿಎಂ ಸಾಗಾಟ ಚುನಾವಣಾ ಆಯೋಗದ ಜವಾಬ್ದಾರಿ, ಈ ಬಗ್ಗೆ ಪಕ್ಷ ಏನೂ ಹೇಳುವುದಿಲ್ಲ ಎಂದು ಬಿಜೆಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News