ಮ್ಯಾನ್ಮಾ ರ್ ಮಹಿಳೆಯನ್ನು ರಕ್ಷಿಸಿದ ಕರ್ನಾಟಕದ ರಕ್ತ .. !

Update: 2018-12-02 10:26 GMT

ಬೆಂಗಳೂರು, ಡಿ.2: ದಾವಣಗೆರೆಯ  ಎಸ್ ಎಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ರಕ್ತ  ಬ್ಯಾಂಕ್ ನಲ್ಲಿ ಸಂಗ್ರಹಿಸ ಡಲಾಗಿದ್ದ  ಅಪರೂಪದ  ಎರಡು ಯೂನಿಟ್ ರಕ್ತ (ಬಾಂಬೆ ಬ್ಲಡ್  ಗ್ರೂಪ್ ) ಮ್ಯಾನ್ಮಾರ್ ನ ಮಹಿಳೆಯೊಬ್ಬರ ಜೀವ ಉಳಿಸಿದೆ.

ಮ್ಯಾನ್ಮಾರ್ ಯಾನ್ಗಾನ್ ಜನರಲ್ ಆಸ್ಪತ್ರೆಯಲ್ಲಿರುವ  ಹೃದಯದ ಶಸ್ತ್ರ ಚಿಕಿತ್ಸೆಗೆ 34ರ  ಹರೆಯದ ಮಹಿಳೆಯೊಬ್ಬರಿಗೆ ರಕ್ತ ಬೇಕಾಗಿತ್ತು. ಆದರೆ ಆ ದೇಶದಲ್ಲಿ ಅವರ ರಕ್ತಕ್ಕೆ ಹೊಂದಿಕೆಯಾಗುವ ರಕ್ತ ಇರಲಿಲ್ಲ.

ಮ್ಯಾನ್ಮಾರ್ ನ ಮಹಿಳೆ ಗೆ ಬೇಕಾದ ರಕ್ತ ದಾವಣಗೆರೆಯ ಎಸ್ ಎಸ್ ಇನ್ಸ್ಟಿಟ್ಯೂಟ್  ಆಫ್ ಮೆಡಿಕಲ್ ಸಯನ್ಸ್ ಆ್ಯಂಡ್ ರಿಸರ್ಚ್  ಇನ್ಸ್ಟಿಟ್ಯೂಟ್ ನಲ್ಲಿ  ಇದೆ ಎಂಬ ಮಾಹಿತಿಯನ್ನು  ಅರಿತುಕೊಂಡ ಮ್ಯಾನ್ಮಾ ರ್ ನ ವೈದ್ಯರು  ಕೋರಿಯರ್ ಮೂಲಕ ರಕ್ತವನ್ನು ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಂಬೆ ರಕ್ತ ಗುಂಪು  ಎನ್ನುವುದು ಅಪರೂಪದ ರಕ್ತದ ಗುಂಪು. 1952ರಲ್ಲಿ ಬಾಂಬೆಯಲ್ಲಿ ಇದನ್ನು ಕಂಡು ಹಿಡಿಯಲಾಗಿತ್ತು. ಇದು o + ಗುಂಪಿಗೆ ಸೇರಿದ್ದು, ಭಾರತದಲ್ಲಿ 10,000 -17,000 ಮಂದಿಯಲ್ಲಿ ಒಬ್ಬರಲ್ಲಿ ಮಾತ್ರ  ಇಂತಹ ಗುಂಪಿನ ರಕ್ತ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News