ದುನಿಯಾ ವಿಜಯ್ ಗೆ ಮಹಿಳಾ ಆಯೋಗದಿಂದ ನೋಟಿಸ್

Update: 2018-12-07 15:47 GMT

ಬೆಂಗಳೂರು, ಡಿ.7: ಕೌಟುಂಬಿಕ ಕಲಹ ಆರೋಪ ಹಿನ್ನಲೆ ರಾಜ್ಯ ಮಹಿಳಾ ಆಯೋಗದಿಂದ ನಟ ದುನಿಯಾ ವಿಜಯ್‌ಗೆ ನೋಟಿಸ್ ಜಾರಿ ಮಾಡಿದೆ.

ಇತ್ತೀಚಿಗೆ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರನ್ನು ಭೇಟಿ ಮಾಡಿ, ಆಸ್ತಿ ವಿಚಾರ ಸಂಬಂಧ ದೂರು ನೀಡಿದ್ದರು ಎನ್ನಲಾಗಿದೆ.

ಈ ಸಂಬಂಧ ನಾಗರತ್ನ ಅವರ ಮನವಿಯಂತೆ ರಾಜ್ಯ ಮಹಿಳಾ ಆಯೋಗ ದುನಿಯಾ ವಿಜಯ್ ಅವರಿಗೆ ನೋಟಿಸ್ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್, ಸದ್ಯದಲ್ಲೇ ಮಹಿಳಾ ಆಯೋಗಕ್ಕೆ ಬಂದು ಉತ್ತರ ನೀಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News