ನಿಕ್ಕಿ ಹೇಲಿ ಉತ್ತರಾಧಿಕಾರಿ ಹೆದರ್ ನೋವರ್ಟ್?

Update: 2018-12-07 16:11 GMT

ವಾಶಿಂಗ್ಟನ್, ಡಿ. 7: ವಿಶ್ವಸಂಸ್ಥೆಗೆ ಅಮೆರಿಕದ ಮುಂದಿನ ರಾಯಭಾರಿಯಾಗಿ ವಿದೇಶಾಂಗ ಇಲಾಖೆಯ ವಕ್ತಾರೆ ಹಾಗೂ ಮಾಜಿ ಪತ್ರಕರ್ತೆ ಹೆದರ್ ನೋವರ್ಟ್‌ರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಿಸಲಿದ್ದಾರೆ. ಅವರು ನಿಕ್ಕಿ ಹೇಲಿಯ ಸ್ಥಾನವನ್ನು ವಹಿಸಿಕೊಳ್ಳುತ್ತಾರೆ.

ನಿಕ್ಕಿ ಹೇಲಿ ತನ್ನ ಸ್ಥಾನವನ್ನು ಈ ವರ್ಷದ ಕೊನೆಯಲ್ಲಿ ತೆರವುಗೊಳಿಸುತ್ತಾರೆ.

ಇನ್ನೊಂದು ಬೆಳವಣಿಗೆಯಲ್ಲಿ, ದಿವಂಗತ ಅಧ್ಯಕ್ಷ ಜಾರ್ಜ್ ಎಚ್.ಡಬ್ಲು. ಬುಶ್ ಆಡಳಿತದಲ್ಲಿ ಕಾನೂನು ಇಲಾಖೆಯ ಮುಖ್ಯಸ್ಥರಾಗಿದ್ದ ವಿಲಿಯಮ್ ಬರ್ ಅಟಾರ್ನಿ ಜನರಲ್ ಜೆಫ್ ಸೆಶನ್ಸ್‌ರ ಉತ್ತರಾಧಿಕಾರಿಯಾಗುವ ಸ್ಪರ್ಧೆಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಈವರೆಗೆ ಯಾವುದೇ ನೇಮಕಾತಿಯನ್ನು ಘೋಷಿಸಿಲ್ಲವಾದರೂ, ನೋವರ್ಟ್‌ರ ನೇಮಕಾತಿಯನ್ನು ಸರಕಾರದ ಹಿರಿಯ ಅಧಿಕಾರಿಗಳು ದೃಢೀಕರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ನೋವರ್ಟ್ 2017 ಎಪ್ರಿಲ್‌ನಲ್ಲಿ ವಿದೇಶಾಂಗ ಇಲಾಖೆಯ ವಕ್ತಾರರಾಗಿ ಟ್ರಂಪ್ ಆಡಳಿತವನ್ನು ಸೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News