ಬಿಎಚ್‌ಇಎಲ್ ಉದ್ಯೊಗಿಗಳಿಂದ ಕೊಡಗು ನಿರಾಶ್ರಿತರಿಗೆ 53.14 ಲಕ್ಷ ರೂ.ಪರಿಹಾರ

Update: 2018-12-07 16:36 GMT

ಬೆಂಗಳೂರು, ಡಿ.7: ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರ ಪುನರ್‌ವಸತಿಗಾಗಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ.(ಬಿಎಚ್‌ಇಎಲ್) ಬೆಂಗಳೂರು ಘಟಕದ ಉದ್ಯೋಗಿಗಳು ತಮ್ಮ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.

ಬೆಂಗಳೂರು ಘಟಕಗಳಾದ ವಿದ್ಯುನ್ಮಾನ ವಿಭಾಗ ಮತ್ತು ಸೆರಾಮಿಕ್ ಬ್ಯುಸಿನೆಸ್ ಯೂನಿಟ್ ಉದ್ಯೋಗಿಗಳು ಒಂದು ದಿನದ ಒಟ್ಟು ಸಂಬಳ 53.14ಲಕ್ಷ ರೂ.ಗಳ ಚೆಕ್‌ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ವಿದ್ಯುನ್ಮಾನ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಆನಂದ ಸಿ. ಮತ್ತು ಸಿಬಿಯು ಘಟಕದ ಪ್ರಧಾನ ವ್ಯವಸ್ಥಾಪಕ ಉಸ್ತುವಾರಿ ಗೌತಮ್ ಚಕ್ಲದಾರ್ ನೀಡಿದರು. ಈ ವೇಳೆ ವಿದ್ಯುನ್ಮಾನ ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಆನಂದ ಮಾತನಾಡಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿ ಜಿಲ್ಲೆಯ ಕೊಡುಗೆ ಇದೆ. ಅದರಲ್ಲೂ ಕೊಡಗು ದೇಶ ಸೇವೆಗೆ ದೊಡ್ಡ ಹೆಸರು ಪಡೆದಿದೆ. ಈಗ ಅಲ್ಲಿನ ಜನತೆ ಪ್ರವಾಹಕ್ಕೆ ತುತ್ತಾಗಿ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ರಾಜ್ಯದ ಜನತೆ ಧಾವಿಸುವುದು ಜವಾಬ್ದಾರಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News