ರಾಜಸ್ಥಾನ: ರಸ್ತೆಯಲ್ಲಿ ಇವಿಎಂ ಮೆಷಿನ್ ಪತ್ತೆ

Update: 2018-12-08 06:10 GMT

ಶಹಬಾದ್, ಡಿ.8: ಸೀಲ್ ಮಾಡಲ್ಪಟ್ಟ ಇವಿಎಂ ಒಂದು ರಸ್ತೆಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ. ರಾಜಸ್ಥಾನದ ಬರಾನ್ ಜಿಲ್ಲೆಯ ಕಿಶನ್ ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

ಇವಿಎಂ ರಸ್ತೆಯಲ್ಲಿ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾದ ತಕ್ಷಣ ಅಧಿಕಾರಿಗಳಾದ ಅಬ್ದುಲ್ ರಫೀಕ್ ಮತ್ತು ನವಾಲ್ ಸಿಂಗ್ ಪಟ್ವಾರಿಯವರನ್ನು ಅಮಾನತುಗೊಳಿಸಲಾಗಿದೆ. ಇವಿಎಂ ಅನ್ನು ಸ್ಟ್ರಾಂಗ್ ರೂಂನಲ್ಲಿ ಇರಿಸಬೇಕಾಗಿದ್ದು, ಇಬ್ಬರು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ. ಇವಿಎಂ ಟ್ರಕ್ ನಿಂದ ರಸ್ತೆಗೆ ಬಿದ್ದಿರಬೇಕು ಎಂದು ಜಿಲ್ಲಾ ಕಲೆಕ್ಟರ್ ಎಸ್.ಪಿ.ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ರಾಜಸ್ಥಾನದ 199 ಸೀಟುಗಳಿಗೆ ನಿನ್ನೆ ಚುನಾವಣೆ ನಡೆದಿದ್ದು, 72.7 ಶೇ. ಮತದಾನ ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News