ಈ ಸೋಲಿಲ್ಲದ ಸರದಾರ ಜಯಗಳಿಸಿದ್ದು ಎಷ್ಟನೆ ಬಾರಿ ಗೊತ್ತಾ?

Update: 2018-12-11 17:23 GMT

ಹೈದರಾಬಾದ್, ಡಿ. 11: ತೆಲಂಗಾಣ ವಿಧಾನ ಸಭೆ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕ ಹಾಗೂ ಹಾಲಿ ನೀರಾವರಿ ಸಚಿವ ಟಿ. ಹರೀಶ್ ರಾವ್ ಸಿದ್ದಿಪೇಟ್ ಕ್ಷೇತ್ರದಿಂದ ಸತತ 6ನೇ ಬಾರಿ ಭಾರೀ ಮತಗಳ ಅಂತರದೊಂದಿಗೆ ಜಯ ಗಳಿಸಿದ್ದಾರೆ.

ಟಿಆರ್‌ಎಸ್ ವರಿಷ್ಠ ಕೆ. ಚಂದ್ರಶೇಖರ್ ರಾವ್ ಅವರ ಸೋದರಳಿ ಯರಾಗಿರುವ ಹರೀಶ್ ರಾವ್ ವಿರುದ್ಧ ಪ್ರಬಲ ಪ್ರತಿಸ್ಪರ್ಧಿ ಇರಲಿಲ್ಲ. ಆದುದರಿಂದ ಸ್ಪರ್ಧೆಯೇ ಇರಲಿಲ್ಲ. ತೆಲಂಗಾಣ ಜನ ಸಮಿತಿ (ಟಿಜೆಎಸ್) ಸಾಮಾಜಿಕ ಹೋರಾಟಗಾರ ಭವಾನಿ ಮರಿಕಾಂತಿ ರೆಡ್ಡಿ ಅವರನ್ನು ಕಣಕ್ಕೆ ಇಳಿಸಿತ್ತು. ಬಿಜೆಪಿ ನೈನಿ ನರೋತ್ತಮ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿತ್ತು. 2004ರ ವಿಧಾನ ಸಭೆ ಚುನಾವಣೆಯಲ್ಲಿ ಸಿದ್ದಿಪೇಟೆ ಕ್ಷೇತ್ರದಲ್ಲಿ ತೆಲುಗು ದೇಶಂ ಪಕ್ಷದ ಛೆರುಕು ಮುಥ್ಯಂ ರೆಡ್ಡಿ ಅವರನ್ನು 24,829 ಮತಗಳ ಅಂತರದಿಂದ ಸೋಲಿಸಿದ ಬಳಿಕ ಕೆ.ಸಿ. ಚಂದ್ರಶೇಖರ್ ರಾವ್ ಅದೇ ಕ್ಷೇತ್ರದಲ್ಲಿ 2004ರ ವರೆಗೆ ನಿರಂತರ ಜಯ ಗಳಿಸುತ್ತಾ ಬಂದಿದ್ದರು. 2004ರ ನಂತರ ತನ್ನ ಮಾವ ಹಾಗೂ ಮಾರ್ಗದರ್ಶಿ ಆಗಿರುವ ಕೆಸಿಆರ್‌ ಅವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಆರಂಭಿಸಿದ ಹರೀಶ್ ರಾವ್ ನಿರಂತರ ಜಯ ಗಳಿಸುತ್ತಾ ಬಂದಿದ್ದಾರೆ.

ಹರೀಶ್ ರಾವ್ ಟಿಆರ್‌ಎಸ್ ಸ್ಥಾಪಕ ಅಧ್ಯಕ್ಷ. ಅವರು ಚುನಾವಣೆಯಲ್ಲಿ ಎಂದಿಗೂ ಸೋತಿಲ್ಲ. ಸಿದ್ದಿಪೇಟ್ ಕ್ಷೇತ್ರದಲ್ಲಿ ಹರೀಶ್ ರಾವ್ ಜಯ ಗಳಿಸಿದ ಬಳಿಕ ಅದು ಟಿಆರ್‌ಎಸ್ ಭದ್ರ ಕೋಟೆಯಾಗಿ ಮಾರ್ಪಟ್ಟಿತ್ತು. ಕೆಲವು ಚುನಾವಣೆಯಲ್ಲಿ ಹರೀಶ್ ರಾವ್ ಭಾರೀ ಮತಗಳ ಅಂತರದಿಂದ ಜಯ ಗಳಿಸಿರುವುದು ಪ್ರತಿಸ್ಪರ್ಧಿಗಳು ಠೇವಣಿ ಕಳೆದುಕೊಳಲೂ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News